Publish Date: Wed, 06 Jan 2021 (08:56 IST)
Updated Date: Wed, 06 Jan 2021 (08:57 IST)
ಬೆಂಗಳೂರು: ಹೊಸ ವರ್ಷದ ಆರಂಭದ ದಿನವೇ ಸ್ಟಾರ್ ಸಿನಿಮಾಗಳ ಬಿಡುಗಡೆ ವಿಚಾರ ಕೇಳಿಬಂದಿತ್ತು. ಯುವರತ್ನ, ಕೋಟಿಗೊಬ್ಬ 3 ರಿಲೀಸ್ ಡೇಟ್ ಈಗಾಗಲೇ ಬಹಿರಂಗವಾಗಿದೆ. ಇದೀಗ ದರ್ಶನ್ ರ ರಾಬರ್ಟ್ ಸಿನಿಮಾ ಯಾವಾಗ ಎಂಬ ಪ್ರಶ್ನೆ ಮೂಡಿದೆ.
ಮೂಲಗಳ ಪ್ರಕಾರ ಈ ಸಿನಿಮಾವೂ ಏಪ್ರಿಲ್ ನಲ್ಲೇ ತೆರೆ ಕಾಣುವ ಸಾಧ‍್ಯತೆಯಿದೆ. ಇನ್ನು ಎರಡು ತಿಂಗಳ ಬಳಿಕ ಚಿತ್ರಮಂದಿರದಲ್ಲೂ ಪೂರ್ಣ ಪ್ರಮಾಣದ ಪ್ರೇಕ್ಷಕರಿಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ಹೀಗಾಗಿ ಏಪ್ರಿಲ್ ಬಳಿಕ ರಾಬರ್ಟ್ ಕೂಡಾ ತೆರೆಗೆ ಬರುವ ನಿರೀಕ್ಷೆಯಿದೆ. ಇದರ ಜೊತೆಗೆ ಧ್ರುವ ಸರ್ಜಾ ಅಭಿನಯದ ಪೊಗರು ಸಂಕ್ರಾಂತಿಗೆ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಇದೂ ಕೂಡಾ ಮಾರ್ಚ್-ಏಪ್ರಿಲ್ ವೇಳೆಗೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಮಾರ್ಚ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳ ಸುಗ್ಗಿ ನಡೆಯೋದು ಖಂಡಿತಾ.