Select Your Language

Notifications

webdunia
webdunia
webdunia
webdunia

ಒಂದೇ ಡೇಟ್ ಗಾಗಿ ಕಿಚ್ಚ ಸುದೀಪ್, ದರ್ಶನ್ ಕ್ಲ್ಯಾಶ್!

ಒಂದೇ ಡೇಟ್ ಗಾಗಿ ಕಿಚ್ಚ ಸುದೀಪ್, ದರ್ಶನ್ ಕ್ಲ್ಯಾಶ್!
ಬೆಂಗಳೂರು , ಬುಧವಾರ, 6 ಜನವರಿ 2021 (11:10 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಾ? ಎರಡೂ ಸಿನಿಮಾಗಳ ನಡುವೆ ಡೇಟ್ ಕ್ಲ್ಯಾಶ್ ಆಗುವ ಸಾಧ‍್ಯತೆಯಿದೆ.


ಈಗಾಗಲೇ ಕೋಟಿಗೊಬ್ಬ 3 ನಿರ್ಮಾಪಕರು ಏಪ್ರಿಲ್ 23 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದೀಗ ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ಕೂಡಾ ಅದೇ ದಿನ ರಾಬರ್ಟ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಕೋಟಿಗೊಬ್ಬ 3 ಬಿಡುಗಡೆ ದಿನಾಂಕ ಘೋಷಣೆ ಮೊದಲಾಗಿರುವುದರಿಂದ ಇದೀಗ ಉಮಾಪತಿ ಗೌಡರು ಕೋಟಿಗೊಬ್ಬ 3 ನಿರ್ಮಾಪಕರೊಂದಿಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಒಂದೇ ದಿನ ಎರಡೂ ಸಿನಿಮಾಗಳೂ ಬಿಡುಗಡೆಯಾದರೆ ಮೊದಲೇ ಕಿತ್ತಾಡುವ ಇಬ್ಬರು ಸ್ಟಾರ್ ಗಳ ಫ್ಯಾನ್ ವಾರ್ ತಾರಕಕ್ಕೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಟನೊಂದಿಗೆ ಚಿತ್ರ ಮಾಡುವ ಹಂಬಲ ವ್ಯಕ್ತಪಡಿಸಿದ ನಿರ್ದೇಶಕ ರಾಜೀವ್ ಮೆನನ್