Select Your Language

Notifications

webdunia
webdunia
webdunia
webdunia

ಬರ್ತ್ ಡೇಗೂ ಮೊದಲು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್

ಬರ್ತ್ ಡೇಗೂ ಮೊದಲು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಬುಧವಾರ, 6 ಜನವರಿ 2021 (09:56 IST)
ಬೆಂಗಳೂರು: ಇನ್ನೇನು ತಮ್ಮ ನೆಚ್ಚಿನ ಸ್ಟಾರ್ ರಾಕಿ ಭಾಯ್ ಹುಟ್ಟುಹಬ್ಬ, ಆ ದಿನ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿಶ್ ಮಾಡಬಹುದು ಎಂದು ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿದೆ.


ನಿನ್ನೆ ಸಂಜೆ ವಿಶೇಷ ವಿಡಿಯೋ ಮೂಲಕ ಯಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಬಾರಿ ನನ್ನ ಬರ್ತ್ ಡೇ ಆಚರಿಸಲು ಮನೆಗೆ ಗುಂಪಾಗಿ ಬಂದು ಕೊರೋನಾ ಅಪಾಯ ತಂದುಕೊಳ್ಳಬೇಡಿ. ಎಲ್ಲರೂ ಎಲ್ಲಿ ಇದ್ದೀರೋ ಅಲ್ಲಿಂದಲೇ ನನಗೆ ಆಶೀರ್ವದಿಸಿ. ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದರೆ ಸಾಕು. ಯಾರೂ ಮನೆ ಬಳಿ ಬರಬೇಡಿ. ಇದರಿಂದ ನನ್ನ ಮನೆಯವರಿಗೂ, ನನ್ನ ಅಭಿಮಾನಿಗಳಾದ ನಿಮಗೆಲ್ಲರಿಗೂ ತೊಂದರೆಯಾಗುತ್ತದೆ. ಅದರ ಬದಲಿಗೆ ಬೆಳಿಗ್ಗೆ 10.18 ಕ್ಕೆ ಹೊಂಬಾಳೆ ಫಿಲಂಸ್ ಪೇಜ್ ನಲ್ಲಿ ನನ್ನ ಕೆಜಿಎಫ್ 2 ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಅದನ್ನು ನೋಡಿ ಹಾರೈಸಿದರೆ ಸಾಕು ಎಂದು ಯಶ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ಲೈವ್ ಬರ್ತಾರಂತೆ ಡಿ ಬಾಸ್ ದರ್ಶನ್: ಕೊನೆಗೂ ಆ ಸುದ್ದಿ ಹೇಳ್ತಾರಾ?!