Publish Date: Wed, 06 Jan 2021 (14:50 IST)
Updated Date: Wed, 06 Jan 2021 (14:52 IST)
ಚೆನ್ನೈ : ಮಾಧವನ್ ಒಬ್ಬ ಖ್ಯಾತ ನಟ. ಇವರು ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳ ಜೊತೆ ಸಂವಹನ ನಡೆಸುತ್ತಿರುತ್ತಾರೆ. ಈ ನಡುವೆ ಮಾಧವನ್ ಅವರ ಅಭಿಮಾನಿಯೊಬ್ಬರು ಟ್ವೀಟರ್ ನಲ್ಲಿ ಅವರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಮಾಧವನ್ ತನ್ನ ಅದ್ಭುತ ವೃತ್ತಿ ಜೀವನ, ಆರೋಗ್ಯವನ್ನು ಆಲ್ಕೋಹಾಲ್ ಮತ್ತು ಡ್ರಗ್ಸ್ ನಿಂದ ಹಾಳು ಮಾಡುಕೊಳ್ಳುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಅವರು ಬಾಲಿವುಡ್ ಗೆ ಪ್ರವೇಶಿಸಿದಾಗ ಹೂ ಮೊಗ್ಗಿನಂತೆ ತಾಜಾವಾಗಿದ್ದರು . ಈಗ ಅವರ ಕಣ್ಣು, ಮುಖ ಎಲ್ಲವನ್ನೂ ತಿಳಿಸುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ಮಾಧವನ್ ತಕ್ಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ.