ವಿಡಿಯೋ ಸಂದೇಶ ನೀಡಿದ ಪುನೀತ್ ರಾಜ್ ಕುಮಾರ್

ಶನಿವಾರ, 5 ಅಕ್ಟೋಬರ್ 2019 (09:05 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ಅಕ್ಟೋಬರ್ 7 ರಂದು ಬಿಡುಗಡೆಯಾಗುತ್ತಿದೆ.


ಈ ಸಿನಿಮಾ ಟೀಸರ್ ಬಿಡುಗಡೆಗೆ ಪವರ್ ಸ್ಟಾರ್ ಅಪ್ಪು ತಮ್ಮ  ಅಭಿಮಾನಿಗಳಿಗೆ ವಿಶೇಷ ಆಹ್ವಾನವಿತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ವಿಡಿಯೋ ಸಂದೇಶ ನೀಡಿ ಆಹ್ವಾನ ನೀಡಿದ್ದಾರೆ.

‘ಇದೇ ಅಕ್ಟೋಬರ್ 7 ರಂದು ಆಯುಧ ಪೂಜೆ ದಿನ ಸಂತೋಷ್ ಥಿಯೇಟರ್ ನಲ್ಲಿ ಸಂಜೆ 5.30 ಗಂಟೆಗೆ ಬಿಡುಗಡೆಯಾಗುತ್ತಿದೆ. ರಾಜಕುಮಾರ ಸಿನಿಮಾ ನೋಡಿ ಆಶೀರ್ವಾದ ಮಾಡಿದ ಅಭಿಮಾನಿಗಳಿಗೆಲ್ಲಾ ಸ್ವಾಗತ. ಅದೇ ಟೀಮ್ ನಿಂದ ಯುವರತ್ನ ಸಿನಿಮಾ ನಿರ್ಮಾಣವಾಗುತ್ತಿದೆ. ರಾಜಕುಮಾರ ಸಿನಿಮಾಗೆ ಕೊಟ್ಟಷ್ಟೇ ಪ್ರೋತ್ಸಾಹ ಈ ಸಿನಿಮಾಗೂ ನೀವು ನೀಡ್ತೀರಿ ಎಂದು ಅಂದುಕೊಂಡಿದ್ದೇನೆ’ ಎಂದು ಪುನೀತ್ ಆಹ್ವಾನವಿತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಿಂದಿ ಭಾಷೆ ಡಯಾಪರ್ ನಲ್ಲಿರುವ ಪುಟ್ಟ ಮಗುವಿನಂತೆ ಎಂದ ಕಮಲ್ ಹಾಸನ್