Publish Date: Fri, 04 Oct 2019 (09:44 IST)
Updated Date: Fri, 04 Oct 2019 (09:58 IST)
ಬೆಂಗಳೂರು: ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಇತ್ತೀಚೆಗೆ ಉದ್ದ ದಾಡಿ ಬಿಟ್ಟುಕೊಂಡು ಓಡಾಡುತ್ತಿರುವುದರ ಹಿಂದಿನ ರಹಸ್ಯ ಬಹಿರಂಗಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಉದ್ದ ಗಡ್ಡದ ಫೋಟೋ ನೋಡಿ ಅಭಿಮಾನಿಯೊಬ್ಬರು ಮಾಡಿದ ಕಾಮೆಂಟ್ ಗೆ ಜೆಕೆ ಪ್ರತಿಕ್ರಿಯಿಸಿದ್ದು ಇದು ತನಗೆ ಕೆಲಸ ಕೊಟ್ಟಿದೆ ಎಂದಿದ್ದಾರೆ.
ಜೆಕೆ ನೀವು ತುಂಬಾ ಹ್ಯಾಂಡ್ ಸಮ್. ಆದರೆ ನಿಮಗೆ ಉದ್ದದ ದಾಡಿ ಚೆನ್ನಾಗಿ ಕಾಣಿಸಲ್ಲ. ಇದಕ್ಕೆ ಯಾವಾಗ ಕತ್ತರಿ ಹಾಕುತ್ತೀರಿ ಎಂದು ನೆಟ್ಟಿಗರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಜೆಕೆ ನನಗೆ ಈ ದಾಡಿಯಿಂದಾಗಿಯೇ ಬಾಲಿವುಡ್ ನಲ್ಲೂ ಅವಕಾಶ ಸಿಗುತ್ತಿದೆ. ಇದು ಒಂಥರಾ ನನಗೆ ಅದೃಷ್ಟ ತಂದಿದೆ ಎಂದಿದ್ದಾರೆ.