Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ರಚಿತಾ ರಾಮ್ ಕಡೆಯಿಂದ ಮೂರು ಗುಡ್ ನ್ಯೂಸ್

ಬರ್ತ್ ಡೇ ದಿನ ರಚಿತಾ ರಾಮ್ ಕಡೆಯಿಂದ ಮೂರು ಗುಡ್ ನ್ಯೂಸ್
ಬೆಂಗಳೂರು , ಗುರುವಾರ, 3 ಅಕ್ಟೋಬರ್ 2019 (09:46 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇಂದು ಜನ್ಮದಿನದ ಸಂಭ್ರಮ. ನಿನ್ನೆಯಿಂದಲೇ ರಚಿತಾ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ.


ಈ ನಡುವೆ ರಚಿತಾ ಅಭಿಮಾನಿಗಳಿಗೆ ಈ ಬಾರಿ ಮೂರು ಗುಡ್ ನ್ಯೂಸ್ ಸಿಗುತ್ತಿದೆ. ರಚಿತಾ ಮತ್ತು ಶಿವರಾಜ್ ಕುಮಾರ್ ಅಭಿನಯಿಸಿರುವ ಆಯುಷ್ಮಾನ್ ಭವ ಸಿನಿಮಾದ ಲಿರಿಕಲ್ ಹಾಡೊಂದು ನಾಳೆ ಬಿಡುಗಡೆಯಾಗುತ್ತಿದೆ.


ಎರಡನೆಯ ಗುಡ್ ನ್ಯೂಸ್ ಏನೆಂದರೆ ರಚಿತಾ ಏಪ್ರಿಲ್ ಎನ್ನುವ ಮಹಿಳಾ ಪ್ರಧಾನ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿತ್ತು. ಅದೀಗ ಕನ್ ಫರ್ಮ್ ಆಗಿದ್ದು ಆ ಸಿನಿಮಾಗೆ ರಚಿತಾಗೆ ನಾಯಕರಾಗಿ ಚಿರಂಜೀವಿ ಸರ್ಜಾ ಅಭಿನಯಿಸುವುದು ಪಕ್ಕಾ ಆಗಿದೆ.

ಮೂರನೆಯದಾಗಿ ರಚಿತಾ ಹುಟ್ಟುಹಬ್ಬಕ್ಕೆ ರಮೇಶ್ ಅರವಿಂದ್ ನಿರ್ದೇಶನದ ‘100’ ಚಿತ್ರದ ಲುಕ್ ಹೊರಬಿಟ್ಟಿದ್ದಾರೆ. ರಮೇಶ್ ನಿರ್ದೇಶನದಲ್ಲಿ ರಚಿತಾ ಅಭಿನಯಿಸುತ್ತಿದ್ದು ಈ ಸಿನಿಮಾದಲ್ಲಿ ರಚಿತಾ ಲುಕ್ ನ್ನು ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಚಂದು ಈಗ ರಾಘವೇಂದ್ರ ರಾಜ್ ಕುಮಾರ್ ಮಗ!