Publish Date: Tue, 01 Oct 2019 (10:15 IST)
Updated Date: Tue, 01 Oct 2019 (10:17 IST)
ಬೆಂಗಳೂರು: ಕುರುಕ್ಷೇತ್ರ ಸಿನಿಮಾ 50 ದಿನ ಯಶಸ್ವಿಯಾಗಿ ಪೂರೈಸಿದ್ದು, ಹಿಟ್ ಲಿಸ್ಟ್ ಗೆ ಸೇರ್ಪಡೆಯಾಗಿದೆ. ಈ ಹಿನ್ನಲೆಯಲ್ಲಿ ನಟ ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕೆಜಿಎಫ್ ಬಳಿಕ ಕುರುಕ್ಷೇತ್ರ 100 ಕೋಟಿ ಕ್ಲಬ್ ಸೇರ್ಪಡೆಯಾದ ದಾಖಲೆ ಮಾಡಿತ್ತು. ಈ ಪೌರಾಣಿಕ ಚಿತ್ರದ ಯಶಸ್ಸಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖುಷಿಯಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಸಂದೇಶ ಬರೆದಿರುವ ದರ್ಶನ್ ‘ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡಬೇಕೆಂದು ಪಣ ತೊಟ್ಟ ನಿರ್ಮಾಪಕರಿಗೆ ಅವರ ಆಸೆಗೆ ಬೆನ್ನುಲುಬಾಗಿ ನಿಂತ ಇಡೀ ಚಿತ್ರರಂಗಕ್ಕೆ, ಕೊನೆಯದಾಗಿ ಪ್ರೀತಿಯಿಂದ ಚಿತ್ರಮಂದಿರಕ್ಕೆ ಧಾವಿಸಿ ಆಶೀರ್ವದಿಸಿದ ಅಭಿಮಾನಿಗಳು ಕರ್ನಾಟಕ ಜನತೆಗೆ ನನ್ನ ಹೃತ್ಪೂರ್ವಕ ವಂದನೆಗಳು’ ಎಂದು ಧನ್ಯವಾದ ಸಲ್ಲಿಸಿದ್ದಾರೆ.