ಬೆಂಗಳೂರು: ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾಗುವುದು ಹೊಸದೇನಲ್ಲ. ಆದರೆ ಡಿ ಬಾಸ್ ದರ್ಶನ್ ಮತ್ತು ಬಹುತಾರಾಗಣವಿರುವ ಕುರುಕ್ಷೇತ್ರ ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಟಿವಿಯಲ್ಲಿ ಪ್ರೀಮಿಯರ್ ಶೋ ಎಂದು ಜಾಹೀರಾತು ಬಂದಿದೆ.
									
										
								
																	
ಕುರುಕ್ಷೇತ್ರ ಸಿನಿಮಾದ ಹಕ್ಕು ಪಡೆದಿರುವ ಜೀ ಕನ್ನಡ ವಾಹಿನಿ ಸದ್ಯದಲ್ಲೇ ಈ ಸೂಪರ್ ಹಿಟ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟಿಸಿದೆ. ಆದರೆ ಇದನ್ನು ನೋಡಿ ಡಿ ಬಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
									
			
			 
 			
 
 			
			                     
							
							
			        							
								
																	ಈಗಲೂ ಸಿನಿಮಾ ಥಿಯೇಟರ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆಗಲೇ ಟಿವಿಯಲ್ಲಿ ಪ್ರಸಾರ ಮಾಡಬೇಡಿ. ಇನ್ನೂ 100 ದಿನ ಪೂರೈಸಿಲ್ಲ. ಅದಕ್ಕೆ ಮೊದಲೇ ಟಿವಿಯಲ್ಲಿ ಪ್ರಸಾರ ಮಾಡುವುದಕ್ಕೆ ಅವಸರವೇನು ಎಂದು ವಾಹಿನಿ ವಿರುದ್ಧ ಡಿ ಬಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಜೀ ಕನ್ನಡ ಸಿನಿಮಾ ಯಾವಾಗ ಪ್ರಸಾರ ಮಾಡುತ್ತೇವೆಂದು ದಿನಾಂಕ ಪ್ರಕಟಿಸಿಲ್ಲ.