Publish Date: Thu, 03 Oct 2019 (09:07 IST)
Updated Date: Thu, 03 Oct 2019 (09:10 IST)
ಬೆಂಗಳೂರು: ವಿಶಾಖಪಟ್ಟಣದಲ್ಲಿ ದ.ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿದಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಇದೀಗ ಶತಕದ ಹೊಸ್ತಿಲಲ್ಲಿದ್ದಾರೆ.
84 ರನ್ ಗಳಿಸಿರುವ ಮಯಾಂಕ್ ಶತಕ ಗಳಿಸಲಿ ಎಂಬುದು ಅಭಿಮಾನಿಗಳ ಹಾರೈಕೆ. ಈ ನಡುವೆ ಕ್ರಿಕೆಟ್ ನ್ನು ಸದಾ ಪ್ರೀತಿಸುವ, ಬೆಂಬಲಿಸುವ ನಟ ಕಿಚ್ಚ ಸುದೀಪ್ ಮಯಾಂಕ್ ಗೆ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ.
‘ನಿನ್ನ ಆಟದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ನಿನ್ನ ಆಟ ನನ್ನ ಮನಸೂರೆಗೊಂಡಿದೆ. ಅದ್ಭುತ ಆರಂಭ ಪಡೆದಿರುವೆ. ಶತಕ ಸನಿಹದಲ್ಲೇ ಇದೆ. ನೀನು ಬ್ಯಾಟ್ ಎತ್ತುವುದನ್ನು ನೋಡಲು ಕಾಯುತ್ತಿರುವೆ. ನಿನಗೆ ನನ್ನ ಹಾರೈಕೆ ಯಾವತ್ತೂ ಇದೆ’ ಎಂದು ಕಿಚ್ಚ ಚಿಯರ್ಸ್ ಹೇಳಿದ್ದಾರೆ.