Select Your Language

Notifications

webdunia
webdunia
webdunia
webdunia

ನನಗೆ ಆರಂಭಿಕ ಸ್ಥಾನವೇ ಸರಿ ಎಂದ ರೋಹಿತ್ ಶರ್ಮಾ

ನನಗೆ ಆರಂಭಿಕ ಸ್ಥಾನವೇ ಸರಿ ಎಂದ ರೋಹಿತ್ ಶರ್ಮಾ
ವಿಶಾಖಪಟ್ಟಣ , ಗುರುವಾರ, 3 ಅಕ್ಟೋಬರ್ 2019 (09:01 IST)
ವಿಶಾಖಪಟ್ಟಣ: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಶತಕ ಬಾರಿಸಿದ ರೋಹಿತ್ ಶರ್ಮಾ ಈ ಬಗ್ಗೆ ದಿನದಾಟದ ಬಳಿಕ ಪ್ರತಿಕ್ರಿಯಿಸಿದ್ದಾರೆ.


ಇದುವರೆಗೆ ಸೀಮಿತ ಓವರ್ ಗಳ ಪಂದ್ಯದಲ್ಲಿ ರೋಹಿತ್ ಆರಂಭಿಕರಾಗಿ ಟೀಂ ಇಂಡಿಯಾಕ್ಕೆ ಉಪಯುಕ್ತ ಕೊಡುಗೆ ನೀಡುತ್ತಿದ್ದರು. ಆದರೆ ಟೆಸ್ಟ್ ನಲ್ಲಿ ಅವರಿಗೆ ಆರಂಭಿಕ ಸ್ಥಾನ ಸಿಕ್ಕಿರಲಿಲ್ಲ. ಇದೀಗ ತಡವಾಗಿಯಾದರೂ ಸಿಕ್ಕಿದ್ದಕ್ಕೆ ರೋಹಿತ್ ಸಂತಸಗೊಂಡಿದ್ದಾರೆ.

‘ನನಗೆ ಆರಂಭಿಕ ಸ್ಥಾನವೇ ಸೂಕ್ತವಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಆಡುವಾಗ ಒಬ್ಬ ಬ್ಯಾಟ್ಸ್ ಮನ್ ಔಟಾಗುವುದನ್ನೇ ಕಾಯುತ್ತಾ ನನ್ನ ಸರದಿಗಾಗಿ ಕಾಯುವ ಬದಲು ನೇರವಾಗಿ ಬ್ಯಾಟ್, ಪ್ಯಾಡ್ ಕಟ್ಟಿಕೊಂಡು ಮೈದಾನಕ್ಕಿಳಿದು ಬ್ಯಾಟ್ ಬೀಸುವುದೇ ನನಗೆ ಸೂಕ್ತ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರಂಭಿಕನಾಗಿ ಕ್ಲಿಕ್ ಆದ ರೋಹಿತ್ ಶರ್ಮಾ: ಇನ್ನು ಕೆಎಲ್ ರಾಹುಲ್ ಗೆ ಟೆಸ್ಟ್ ಪ್ರವೇಶ ಕಷ್ಟ