Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಟೆಸ್ಟ್: ವಿಶ್ವದಾಖಲೆಯ ಹೊಸ್ತಿಲಲ್ಲಿ ನಾಯಕ ವಿರಾಟ್ ಕೊಹ್ಲಿ

ಭಾರತ-ದ.ಆಫ್ರಿಕಾ ಟೆಸ್ಟ್: ವಿಶ್ವದಾಖಲೆಯ ಹೊಸ್ತಿಲಲ್ಲಿ ನಾಯಕ ವಿರಾಟ್ ಕೊಹ್ಲಿ
ವಿಶಾಖಪಟ್ಟಣ , ಬುಧವಾರ, 2 ಅಕ್ಟೋಬರ್ 2019 (07:38 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.


ರನ್ ಮೆಷಿನ್ ಕೊಹ್ಲಿ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 21,000 ರನ್ ಪೂರೈಸಿದ ದಾಖಲೆ ಮಾಡಲು ಕೊಹ್ಲಿಗೆ ಇನ್ನು 281 ರನ್ ಬೇಕಾಗಿದೆ. ಕೊಹ್ಲಿ ಈ ಸರಣಿಯಲ್ಲಿ ಆ ದಾಖಲೆ ಮಾಡಿದರೆ ಕೇವಲ 432 ಇನಿಂಗ್ಸ್ ಗಳಿಂದ ಅಂದರೆ ಅತೀ ವೇಗವಾಗಿ ಈ ರನ್ ಗಳಿಸಿದ ದಾಖಲೆ ಮಾಡಲಿದ್ದಾರೆ.

ಇದಕ್ಕೆ ಮೊದಲು ಭಾರತದ ಸಚಿನ್ ತೆಂಡುಲ್ಕರ್ 473 ಇನಿಂಗ್ಸ್ ಗಳಲ್ಲಿ 21 ಸಾವಿರ ರನ್ ಮಾಡಿ ಈ ದಾಖಲೆಯ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದರು. ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ 485 ಇನಿಂಗ್ಸ್ ಗಳಿಂದ ಈ ದಾಖಲೆ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಮೊದಲ ಟೆಸ್ಟ್ ಇಂದು: ರೋಹಿತ್ ಶರ್ಮಾ ಮೇಲೆ ಒತ್ತಡ