Publish Date: Tue, 01 Oct 2019 (10:03 IST)
Updated Date: Tue, 01 Oct 2019 (10:04 IST)
ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ವೇಗದ ಏಕದಿನ ಶತಕದ ದಾಖಲೆಯೊಂದನ್ನು ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ ಅಜಮ್ ಮುರಿದಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅತೀ ವೇಗವಾಗಿ 11 ಶತಕ ಗಳಿಸಿದ ದಾಖಲೆಯನ್ನು ಬಾಬರ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈವರೆಗೆ ಇದು ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಈ ದಾಖಲೆ ಮಾಡಿದ್ದಾರೆ.
ಕೊಹ್ಲಿ 82 ಇನಿಂಗ್ಸ್ ಗಳಿಂದ ಈ ದಾಖಲೆ ಮಾಡಿದ್ದರೆ ಬಾಬರ್ ಅಜಮ್ ಕೇವಲ 71 ಇನಿಂಗ್ಸ್ ಗಳಿಂದ ಈ ದಾಖಲೆ ಮಾಡಿದ್ದಾರೆ. ಪಾಕ್ ಅಭಿಮಾನಿಗಳು ಬಾಬರ್ ರನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಾರೆ. ಸ್ವತಃ ಬಾಬರ್ ಕೂಡಾ ಕೊಹ್ಲಿಗೆ ನನ್ನನ್ನು ಹೋಲಿಕೆ ಮಾಡಬೇಡಿ, ನಾನು ಅವರಿಂದ ಸ್ಪೂರ್ತಿ ಪಡೆದಿದ್ದೇನೆ ಎನ್ನುತ್ತಿದ್ದರು. ಈಗ ಕೊಹ್ಲಿ ದಾಖಲೆಯನ್ನೇ ಬಾಬರ್ ಮುರಿದಿದ್ದು ವಿಶೇಷವಾಗಿದೆ.