Publish Date: Sun, 29 Sep 2019 (08:44 IST)
Updated Date: Sun, 29 Sep 2019 (08:45 IST)
ಮುಂಬೈ: ಇತ್ತೀಚೆಗೆ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಧೋನಿ ಔಟಾದಾಗ ಎಲ್ಲರಿಗೂ ನಿರಾಶೆಯಾಗಿತ್ತು. ಆದರೆ ಟೀಂ ಇಂಡಿಯಾದ ಈ ಕ್ರಿಕೆಟಿಗ ಕಣ್ಣೀರು ಹಾಕಿದ್ದರಂತೆ.
ಧೋನಿ ಔಟಾದಾಗ ಕಣ್ಣೀರು ಹಾಕಿದ ಆ ಕ್ರಿಕೆಟಿಗ ಯಜುವೇಂದ್ರ ಚಾಹಲ್. ಅನೇಕ ಸಂದರ್ಭದಲ್ಲಿ ಚಾಹಲ್ ತನಗೆ ಧೋನಿ ಸ್ಪೂರ್ತಿಯಾಗಿದ್ದನ್ನು ಹೇಳಿಕೊಂಡಿದ್ದರು. ಆ ರೀತಿ ಸ್ಪೂರ್ತಿ ತುಂಬಿದ ಧೋನಿ ಸೆಮಿಫೈನಲ್ ನಲ್ಲಿ ಔಟಾಗಿ ಸಪ್ಪೆ ಮುಖ ಹಾಕಿಕೊಂಡಿದ್ದಾಗ ಯಜುವೇಂದ್ರ ಚಾಹಲ್ ಗೆ ಕಣ್ಣೀರು ತಡೆಯಲಾಗಲಿಲ್ಲವಂತೆ. ಹಾಗಂತ ಸಂದರ್ಶನವೊಂದರಲ್ಲಿ ಚಾಹಲ್ ಹೇಳಿಕೊಂಡಿದ್ದಾರೆ.
‘ಅದು ನನ್ನ ಮೊದಲ ವಿಶ್ವಕಪ್. ಮಹಿ ಬಾಯ್ ಔಟಾದಾಗ ನಾನು ಕ್ರೀಸ್ ಗೆ ಹೋಗಬೇಕಿತ್ತು. ಆಗ ನನಗೆ ಕಣ್ಣೀರು ತಡೆಯಲಾಗುತ್ತಿರಲಿಲ್ಲ. ತುಂಬಾ ಬೇಸರದಲ್ಲಿದ್ದೆ. ಕಷ್ಟಪಟ್ಟು ಕಣ್ಣೀರು ತಡೆದಿದ್ದೆ’ ಎಂದು ಚಾಹಲ್ ಸ್ಮರಿಸಿಕೊಂಡಿದ್ದಾರೆ.