Publish Date: Sun, 29 Sep 2019 (08:40 IST)
Updated Date: Sun, 29 Sep 2019 (08:41 IST)
ಬೆಂಗಳೂರು: ಕೇರಳ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಿದ ಕೆಎಲ್ ರಾಹುಲ್ ಶತಕ ಸಿಡಿಸಿ ರಾಷ್ಟ್ರೀಯ ಆಯ್ಕೆಗಾರರ ಮುಂದೆ ತಮ್ಮ ಫಾರ್ಮ್ ಪ್ರದರ್ಶಿಸಿದ್ದಾರೆ.
ರಾಹುಲ್ ಶತಕ ಸಿಡಿಸಿದರೆ, ಅತ್ತ ಅವರ ಸ್ಥಾನದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ರೋಹಿತ್ ಶರ್ಮಾ ದ.ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.
ಫಾರ್ಮ್ ಕಳೆದುಕೊಂಡ ರಾಹುಲ್ ರನ್ನು ಆಫ್ರಿಕಾ ಸರಣಿಯಿಂದ ಕೈ ಬಿಡಲಾಗಿದೆ. ಅವರು ದೇಶೀಯ ಕ್ರಿಕೆಟ್ ನಲ್ಲಿ ಫಾರ್ಮ್ ಪ್ರೂವ್ ಮಾಡಿದರೆ ಮುಂದೆ ಟೀಂ ಇಂಡಿಯಾಗೆ ಪರಿಗಣಿಸಲಾಗುವುದು ಎಂದು ಆಯ್ಕೆಗಾರರು ಹೇಳಿದ್ದರು. ಹೀಗಾಗಿ ರೋಹಿತ್ ಶರ್ಮಾರನ್ನು ಟೆಸ್ಟ್ ತಂಡದಲ್ಲಿ ಆರಂಭಿಕರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಕೆಲವು ಪಂದ್ಯಗಳಿಂದ ರೋಹಿತ್ ಮಂಕಾಗಿದ್ದು, ರಾಹುಲ್ ಮಿಂಚುತ್ತಿರುವುದು ಆಯ್ಕೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.