Publish Date: Fri, 27 Sep 2019 (09:45 IST)
Updated Date: Fri, 27 Sep 2019 (09:46 IST)
ಮುಂಬೈ: ಹಿರಿಯ ವಿಕೆಟ್ ಕೀಪರ್ ಧೋನಿ ಮುಂದಿನ ನವಂಬರ್ ವರೆಗೆ ಟೀಂ ಇಂಡಿಯಾ ಆಯ್ಕೆಗೆ ಲಭ್ಯರಿರಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಆದರೆ ಇದಕ್ಕೆ ನಿಜ ಕಾರಣವೇನು ಗೊತ್ತಾ?
ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ರನ್ನು ಪ್ರಶ್ನಿಸಿದಾಗ ಯುವ ವಿಕೆಟ್ ಕೀಪರ್ ಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಧೋನಿ ತಂಡದಿಂದ ಬಿಡುವು ಪಡೆದಿದ್ದಾರೆ ಎಂದಿದ್ದರು. ಆದರೆ ಅಸಲಿಗೆ ಕಾರಣ ಬೇರೆಯದೇ ಇದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಧೋನಿ ವಿಶ್ವಕಪ್ ಸಂದರ್ಭದಲ್ಲಿಯೇ ಬೆನ್ನು ನೋವಿನಿಂದ ಬಳಲುತ್ತಿದ್ದು ಈ ಮಹತ್ವದ ಟೂರ್ನಿ ಬಳಿಕ ವಿಶ್ರಾಂತಿ ಪಡೆಯಲೋಸ್ಕರವೇ ತಂಡದಿಂದ ಹೊರಗುಳಿದಿದ್ದಾರೆ. ಅದಲ್ಲದೆ, ಮಣಿಕಟ್ಟಿನ ನೋವಿಗೂ ತುತ್ತಾಗಿದ್ದಾರೆ. ಇದೇ ಕಾರಣಕ್ಕೆ ಅವರು ಚೇತರಿಸಿಕೊಳ್ಳುವ ತನಕ ಕ್ರಿಕೆಟ್ ನಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಆದರೆ ಈ ಸತ್ಯವನ್ನು ಮುಚ್ಚಿಟ್ಟಿರುವುದು ಯಾಕೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.