Select Your Language

Notifications

webdunia
webdunia
webdunia
webdunia

ವೃತ್ತಿಬದುಕಿನ ಕೊನೆಯ ಕ್ಷಣದಲ್ಲಿ ನನಗೆ ಹೀಗೆ ಮಾಡಬಾರದಿತ್ತು! ಯುವರಾಜ್ ಸಿಂಗ್ ಆಕ್ರೋಶ

ವೃತ್ತಿಬದುಕಿನ ಕೊನೆಯ ಕ್ಷಣದಲ್ಲಿ ನನಗೆ ಹೀಗೆ ಮಾಡಬಾರದಿತ್ತು! ಯುವರಾಜ್ ಸಿಂಗ್ ಆಕ್ರೋಶ
ಮುಂಬೈ , ಶುಕ್ರವಾರ, 27 ಸೆಪ್ಟಂಬರ್ 2019 (09:27 IST)
ಮುಂಬೈ: ತನ್ನ ವೃತ್ತಿ ಬದುಕಿನ ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಡೆಸಿಕೊಂಡ ರೀತಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.


ಟೀಂ ಇಂಡಿಯಾದಲ್ಲಿ ಯಾವುದೇ ಆಟಗಾರನಿಗೂ ಉತ್ತಮ ವಿದಾಯ ಸಿಗುವುದಿಲ್ಲ ಎನ್ನುವುದು ಯುವರಾಜ್ ವಿಷಯದಲ್ಲೂ ನಿಜವಾಗಿತ್ತು. ಈ ಬಗ್ಗೆ ಇದೀಗ ಯುವಿ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ.

ಯುವರಾಜ್ ಸಿಂಗ್ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು ಎಂಬ ಸುದ್ದಿಯಿತ್ತು. ಆದರೆ ಈ ಬಗ್ಗೆ ಇದೀಗ ಮಾತನಾಡಿರುವ ಯುವರಾಜ್ ನಾನು ಯೋ ಯೋ ಟೆಸ್ಟ್ ನಲ್ಲಿ ಪಾಸಾಗಿದ್ದರೂ ನನ್ನನ್ನು ಮೂಲೆಗುಂಪು ಮಾಡಲಾಯಿತು.

ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನನ್ನ ಜತೆ ಸರಿಯಾಗಿ ಸಂವಹನ ನಡೆಸಲಿಲ್ಲ. ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಪ್ರಶಸ್ತಿ ಸ್ವೀಕರಿಸಿದ ಮೇಲೂ ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ನನ್ನನ್ನು ಆಯ್ಕೆ ಮಾಡದೇ ಇದ್ದಾಗ ಅಚ್ಚರಿಯಾಯಿತು. ಅದನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ’ ಎಂದು ಯುವ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಸ್ಪ್ರೀತ್ ಬುಮ್ರಾ ಈ ವರ್ಷ ಕ್ರಿಕೆಟ್ ಆಡುವಂತೆಯೇ ಇಲ್ಲ!