Select Your Language

Notifications

webdunia
webdunia
webdunia
webdunia

ನಾನು ಮಾಡಿದ ತಪ್ಪು ರೋಹಿತ್ ಶರ್ಮಾ ಮಾಡದಿರಲಿ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದೇಕೆ?

ನಾನು ಮಾಡಿದ ತಪ್ಪು ರೋಹಿತ್ ಶರ್ಮಾ ಮಾಡದಿರಲಿ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದೇಕೆ?
ಬೆಂಗಳೂರು , ಭಾನುವಾರ, 29 ಸೆಪ್ಟಂಬರ್ 2019 (08:42 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ ನಾನು ಮಾಡಿದ ತಪ್ಪು ಮಾಡದಿರಲಿ ಎಂದು ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.


ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಲಕ್ಷ್ಮಣ್ ನಾನೂ ಒಮ್ಮೆ ಅಕಸ್ಮಾತ್ತಾಗಿ ಟೆಸ್ಟ್ ತಂಡದಲ್ಲಿ ಆರಂಭಿಕನಾಗುವ ಅವಕಾಶ ಪಡೆದೆ. ಆಗಿನ್ನೂ ನಾನು ನಾಲ್ಕು ಟೆಸ್ಟ್ ಪಂದ್ಯವಾಡಿದ್ದೆ ಅಷ್ಟೇ. ಆಗ ಇದ್ದಕ್ಕಿದ್ದ ಹಾಗೇ ನನಗೆ ಆರಂಭಿಕನಾಗಲು ಹೇಳಿದಾಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಅದಕ್ಕೆ ಹೊಂದಿಕೊಳ್ಳಲು ನನಗೆ ಕಷ್ಟವಾಗಿತ್ತು.

ಆದರೆ ರೋಹಿತ್ ಆ ತಪ್ಪು ಮಾಡದಿರಲಿ. ರೋಹಿತ್ ಗಿರುವ ಏಕೈಕ ಲಾಭವೆಂದರೆ ಅವರು ಈಗಾಗಲೇ 12 ವರ್ಷ ಕ್ರಿಕೆಟ್ ಆಡಿದ  ಅನುಭವ ಹೊಂದಿದ್ದಾರೆ. ಹಾಗಾಗಿ ಅವರಿಗೆ ಟೆಸ್ಟ್ ನಲ್ಲಿ ಆರಂಭಿಕನಾಗಲು ಕಷ್ಟವಾಗದೇನೋ ಎಂದು ಲಕ್ಷ್ಮಣ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶತಕ ಸಿಡಿಸಿ ಆಯ್ಕೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೆಎಲ್ ರಾಹುಲ್