Publish Date: Wed, 02 Oct 2019 (07:40 IST)
Updated Date: Wed, 02 Oct 2019 (07:41 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಇಂದಿನಿಂದ ಆರಂಭವಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದಿಂದ ರಿಷಬ್ ಪಂತ್ ಗೆ ಕೊಕ್ ನೀಡಿ ವೃದ್ಧಿಮಾನ್ ಸಹಾಗೆ ಅವಕಾಶ ನೀಡಿರುವುದರ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.
ಹಲವು ದಿನಗಳ ಬಳಿಕ ವಿಕೆಟ್ ಕೀಪರ್ ಸ್ಥಾನಕ್ಕೆ ಮತ್ತೆ ವೃದ್ಧಿಮಾನ್ ಸಹಾ ಕಮ್ ಬ್ಯಾಕ್ ಮಾಡಿದ್ದಾರೆ. ಇದಕ್ಕೂ ಮೊದಲು ಗಾಯಗೊಂಡು ಸಹಾ ಹಲವು ದಿನಗಳ ಕಾಲ ಬ್ರೇಕ್ ಪಡೆದಿದ್ದರು. ಇದಾದ ಬಳಿಕ ರಿಷಬ್ ಪಂತ್ ರನ್ನು ಭವಿಷ್ಯದ ವಿಕೆಟ್ ಕೀಪರ್ ಆಗಿ ತಯಾರು ಮಾಡುವ ಉದ್ದೇಶದಿಂದ ಹೆಚ್ಚಿನ ಅವಕಾಶ ಪಂತ್ ಗೇ ನೀಡಲಾಗುತ್ತಿತ್ತು.
ಆದರೆ ಪಂತ್ ಫಾರ್ಮ್ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಮತ್ತೆ ಸಹಾಗೆ ಮಣೆ ಹಾಕಲಾಗಿದೆ. ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ‘ವೃದ್ಧಿಮಾನ್ ಸಹಾ ಫಿಟ್ ಆಗಿ ಮರಳಿರುವುದು ಖುಷಿಯ ಸಂಗತಿ. ಅವರು ಈ ಫಾರ್ಮ್ಯಾಟ್ ನಲ್ಲಿ ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲೊಬ್ಬರು. ರಿಷಬ್ ಕೂಡಾ ಪ್ರತಿಭಾವಂತರು. ಆದರೆ ರಿಷಬ್ ಫಿನಿಶರ್ ಆಗಿ, ಒತ್ತಡ ನಿಭಾಯಿಸಲು ಇನ್ನೂ ಕಲಿಯುವುದು ಸಾಕಷ್ಟಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.