Publish Date: Fri, 04 Oct 2019 (09:20 IST)
Updated Date: Fri, 04 Oct 2019 (09:24 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ದಸರಾ ಹಬ್ಬದ ಸಂದರ್ಭ ಲಾಂಚ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು.
ಅದರಂತೆ ಇದೀಗ ಟೀಸರ್ ಬಿಡುಗಡೆ ದಿನಾಂಕ ಬಹಿರಂಗಗೊಳಿಸಿದೆ. ಅಕ್ಟೋಬರ್ 7 ರಂದು ಸಂಜೆ 5.30 ಕ್ಕೆ ಯುವರತ್ನ ಸಿನಿಮಾ ಟೀಸರ್ ಲಾಂಚ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ರಾಜಕುಮಾರ, ನಟಸಾರ್ವಭೌಮ ಚಿತ್ರದ ಬಳಿಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ಅಭಿನಯಿಸುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಇದೂ ಕೂಡಾ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ.