ಹಿಂದಿ ಭಾಷೆ ಡಯಾಪರ್ ನಲ್ಲಿರುವ ಪುಟ್ಟ ಮಗುವಿನಂತೆ ಎಂದ ಕಮಲ್ ಹಾಸನ್

ಶುಕ್ರವಾರ, 4 ಅಕ್ಟೋಬರ್ 2019 (10:22 IST)
ಚೆನ್ನೈ: ಹಿಂದಿ ಹೇರಿಕೆ ವಿರೋಧಿಸಿ ಮಾತನಾಡಿರುವ ಬಹುಭಾಷಾ ತಾರೆ ಕಮಲ್ ಹಾಸನ್ ಈ ಭಾಷೆ ಇನ್ನೂ ಡಯಾಪರ್ ಕಟ್ಟಿಕೊಂಡಿರುವ ಚಿಕ್ಕ ಮಗುವಿನಂತೆ ಎಂದಿದ್ದಾರೆ.


ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಭಾಷೆ ಸರ್ವವ್ಯಾಪಿಯಾಗಬೇಕು ಎಂದಿದ್ದರು. ಆ ಹೇಳಿಕೆ ಹಲವು ವಾದ-ಪ್ರತಿವಾದಗಳಿಗೆ ಕಾರಣವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್ ‘ತಮಿಳು, ತೆಲುಗು, ಸಂಸ್ಕೃತ ಇತ್ಯಾದಿ ಭಾಷೆಗಳಿಗೆ ಹೋಲಿಸಿದರೆ ಹಿಂದಿ ಇನ್ನೂ ಡಯಾಪರ್ ನಲ್ಲಿರುವ ಚಿಕ್ಕಮಗುವಿನಂತೆ. ಅದು ಬೆಳೆಯಬೇಕು ನಿಜ. ಆದರೆ ಅದನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು’ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಭಿಷೇಕ್ ಅಂಬರೀಶ್ ಬರ್ತ್ ಡೇಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?