ಅಭಿಷೇಕ್ ಅಂಬರೀಶ್ ಬರ್ತ್ ಡೇಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಶುಕ್ರವಾರ, 4 ಅಕ್ಟೋಬರ್ 2019 (10:05 IST)
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸುವಾಗ ನಿಖಿಲ್ ಕುಮಾರಸ್ವಾಮಿ ಹಲವು ಮಾತಿನ ಚಕಮಕಿ ನಡೆಸಿರಬಹುದು. ಆದರೆ ಇದು ಯಾವುದೂ ನಿಖಿಲ್ ಮತ್ತು ಸುಮಲತಾ ಪುತ್ರ  ಅಭಿಶೇಕ್ ನಡುವಿನ ಸ್ನೇಹವನ್ನು ಕಡಿಮೆ ಮಾಡಿಲ್ಲ.


ಇಂದು ಅಭಿಷೇಕ್ ಜನ್ಮದಿನವಾಗಿದ್ದು ಗೆಳೆಯನ ಬರ್ತ್ ಡೇಗೆ ನಿಖಿಲ್ ಮರೆಯದೇ ಶುಭ ಹಾರೈಸಿದ್ದಾರೆ. ಚುನಾವಣೆ ಮುಗಿದ ಬಳಿಕ  ಅಭಿಷೇಕ್ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆ ಸಂದರ್ಭದಲ್ಲಿಯೇ ನಿಖಿಲ್ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿ ನಮ್ಮ ನಡುವೆ ವೈಯಕ್ತಿಕವಾಗಿ ಸ್ನೇಹ ಹಸಿರಾಗಿಯೇ ಇದೆ ಎಂದು ಸಾರಿದ್ದರು.

ಅದನ್ನು ಈಗ ಮತ್ತೆ ಸಮರ್ಥಿಸಿಕೊಂಡಿದ್ದು ಅಭಿಷೇಕ್ ಗೆ ಸಾಮಾಜಿಕ ಜಾಲತಾಣದ ಮೂಲಕ ‘ಹ್ಯಾಪಿ ಬರ್ತ್ ಡೇ ಫ್ರೆಂಡ್’ ಎಂದು ಶುಭ ಹಾರೈಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟ ಜೆಕೆಗೆ ಗಡ್ಡದಿಂದಲೇ ಖುಲಾಯಿಸಿತಂತೆ ಅದೃಷ್ಟ!