Publish Date: Fri, 14 Jul 2023 (08:50 IST)
Updated Date: Fri, 14 Jul 2023 (09:10 IST)
ಹೈದರಾಬಾದ್: ಕನ್ನಡ ಮೂಲದ ಪ್ರಶಾಂತ್ ನೀಲ್ ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಸಲಾರ್ ಜೊತೆಗೆ ಎರಡು ತೆಲುಗು ಸಿನಿಮಾಗಳಿಗೆ ಪ್ರಶಾಂತ್ ಆಕ್ಷನ್ ಕಟ್ ಹೇಳಲಿದ್ದಾರೆ.
ಸಲಾರ್ 1 ರ ಬಳಿಕ ಪ್ರಶಾಂತ್ ಸಲಾರ್ 2 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಂತೆ. ಅದಾದ ಬಳಿಕ ಜ್ಯೂ.ಎನ್ ಟಿಆರ್ ಜೊತೆಗಿನ ಸಿನಿಮಾ ಮಾಡಲಿದ್ದಾರೆ. ಇದರ ಬಳಿಕವೂ ಪ್ರಶಾಂತ್ ತೆಲುಗಿನಲ್ಲೇ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಅವರನ್ನು ಒಳಗೊಂಡ ಸಿನಿಮಾವೊಂದನ್ನು ಪ್ರಶಾಂತ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಪುತ್ರನ ಜೊತೆ ತೆರೆ ಹಂಚಿಕೊಳ್ಳುವುದು ಚಿರಂಜೀವಿ ಕನಸು. ಆ ಮೂಲಕ ಪ್ರಶಾಂತ್ ಮೆಗಾಸ್ಟಾರ್ ಕನಸು ನನಸು ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.