Publish Date: Thu, 06 Jul 2023 (08:20 IST)
Updated Date: Thu, 06 Jul 2023 (08:54 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಟೀಸರ್ ಇಂದು ಮುಂಜಾನೆ ರಿಲೀಸ್ ಆಗಿದೆ.
ಟೀಸರ್ ನೋಡುತ್ತಿದ್ದರೆ ಕೆಜಿಎಫ್ ನಂತೇ ಇದೂ ಕೂಡಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಶಾಂತ್ ನೀಲ್ ಶೈಲಿಯ ಸಿನಿಮಾ ಎನ್ನುವುದು ಎದ್ದು ಕಾಣುತ್ತದೆ.
ಕೆಜಿಎಫ್ 2 ನಲ್ಲಿ ರಾಕಿ ಭಾಯಿ ಹೇಳಿದ್ದ ಬಟ್ಲರ್ ಇಂಗ್ಲಿಷ್ ಡೈಲಾಗ್ ಗಳು ಹಿಟ್ ಆಗಿದ್ದವು. ಇಲ್ಲೂ ಅದೇ ರೀತಿ ನಾಯಕನ ವರ್ಣನೆಯನ್ನು ಬಟ್ಲರ್ ಇಂಗ್ಲಿಷ್ ನಲ್ಲಿ ಹೇಳಿಸಲಾಗುತ್ತಿದೆ. ಅವನು ಚೀತಾಗಿಂತಲೂ ಡೇಂಜರ್ ಎಂದು ಪೋಷಕ ಪಾತ್ರಧಾರಿ ನಾಯಕನ ಬಗ್ಗೆ ಬಣ್ಣಿಸುತ್ತಾನೆ. ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಮಿಲಿಯನ್ ಗಟ್ಟಲೆ ವ್ಯೂ ಪಡೆದು ಹಿಟ್ ಆಗಿದೆ. ಸೆಪ್ಟೆಂಬರ್ 28 ರಂದು ಸಲಾರ್ ಥಿಯೇಟರ್ ನಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.