Publish Date: Tue, 04 Jul 2023 (08:50 IST)
Updated Date: Tue, 04 Jul 2023 (09:12 IST)
ಹೈದರಾಬಾದ್: ಆದಿಪುರುಷ್ ಸಿನಿಮಾದಲ್ಲಿ ಪ್ರಭು ಶ್ರೀರಾಮಚಂದ್ರನ ಪಾತ್ರ ಮಾಡಿದ್ದ ನಟ ಪ್ರಭಾಸ್ ಈಗ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಮಹಾವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದು ಸೈನ್ಸ್ ಫಿಕ್ಷನ್ ಸಿನಿಮಾವಾಗಿದ್ದು, ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಬಹುತಾರಾಗಣವಿದೆ.
ದೇವರು ಮತ್ತು ಅಸುರರ ನಡುವಿನ ಯುದ್ಧ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಹೀಗಾಗಿ ಪ್ರಭಾಸ್ ಕೆಟ್ಟದನ್ನು ವಿನಾಶ ಮಾಡುವ ಮಹಾವಿಷ್ಣುವನ್ನು ಪ್ರತಿನಿಧಿಸಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.