Select Your Language

Notifications

webdunia
webdunia
webdunia
webdunia

ಬಾಕ್ಸ್ ಆಫೀಸ್ ನಲ್ಲಿ ಗುದ್ದಾಡಲಿದ್ದಾರೆ ಗೆಳೆಯರಾದ ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ

ಬಾಕ್ಸ್ ಆಫೀಸ್ ನಲ್ಲಿ ಗುದ್ದಾಡಲಿದ್ದಾರೆ ಗೆಳೆಯರಾದ ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ
ಬೆಂಗಳೂರು , ಮಂಗಳವಾರ, 4 ಜುಲೈ 2023 (08:40 IST)
Photo Courtesy: Twitter
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಬಾಕ್ಸ್ ಆಫೀಸ್ ನಲ್ಲಿ ಪೈಪೋಟಿಗಿಳಿಯಲಿದ್ದಾರೆ.

ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾ ಆಗಸ್ಟ್ 25 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಪೋಸ್ಟರ್ ಮೂಲಕ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ.

ಇದೇ ಸಮಯಕ್ಕೆ ಅಂದರೆ ಒಂದು ವಾರದ ನಂತರ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ. ಸೆಪ್ಟೆಂಬರ್ 1 ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಗೆಳೆಯರಿಬ್ಬರ ಸಿನಿಮಾ ರಿಲೀಸ್ ಗೆ ಕೇವಲ 1 ವಾರದ ಗ್ಯಾಪ್ ಅಷ್ಟೇ ಇದೆ. ಹೀಗಾಗಿ ಬಾಕ್ಸ್ ಆಫೀಸ್ ನಲ್ಲಿ ಇಬ್ಬರ ಸಿನಿಮಾವೂ ಪೈಪೋಟಿ ನಡೆಸುವುದು ಖಚಿತ.

ಎರಡೂ ಸಿನಿಮಾಗಳೂ ಬೇರೆ ಬೇರೆ ರೀತಿಯ ಕತೆ, ಶೇಡ್ ನ ಸಿನಿಮಾಗಳಾಗಿರುವುದರಿಂದ ಕ್ಲ್ಯಾಶ್ ಆಗದು ಎನ್ನುವುದು ರಾಜ್ ಬಿ ಶೆಟ್ಟಿ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ತಾನು ಓದಿದ ಕಾಲೇಜು ಕಾರಿಡಾರಿನಲ್ಲಿ ರಕ್ಷಿತ್ ಶೆಟ್ಟಿ: ಆಂಕರ್ ಅನುಶ್ರೀ ಸಾಥ್