Select Your Language

Notifications

webdunia
webdunia
webdunia
webdunia

ಸಿನಿಮಾ ಕನಸು, ಪ್ರೀತಿ, ಪ್ರೇರಣೆ ಬಗ್ಗೆ ಮುಕ್ತವಾಗಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಸಿನಿಮಾ ಕನಸು, ಪ್ರೀತಿ, ಪ್ರೇರಣೆ ಬಗ್ಗೆ ಮುಕ್ತವಾಗಿ ಹಂಚಿಕೊಂಡ ರಕ್ಷಿತ್ ಶೆಟ್ಟಿ
ಬೆಂಗಳೂರು , ಸೋಮವಾರ, 3 ಜುಲೈ 2023 (16:01 IST)
ಬೆಂಗಳೂರು: ಇಂದು ಗುರುಪೂರ್ಣಿಮೆ ದಿನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಹಂಚಿಕೊಂಡು ತಮ್ಮ ಮುಂದಿನ ಎರಡು ಸಿನಿಮಾ ಕತೆಗಳಿಗೆ ಸ್ಪೂರ್ತಿ ಯಾರು ಎಂದು ಹೇಳಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಕೆಲವು ವರ್ಷಗಳ ಬ್ರೇಕ್ ನ ನಂತರ ನಿರ್ದೇಶನಕ್ಕೆ ಮರಳುತ್ತಿರುವ ಸಿನಿಮಾ ರಿಚರ್ಡ್ ಆಂಟನಿ ಹಾಗೂ ಪುಣ್ಯ ಕೋಟಿ. ಈ ಎರಡೂ ಸಿನಿಮಾಗಳಿಗೆ ತಮಗೆ ಪ್ರೇರಣೆ ಜೊತೆಗೆ ತಮ್ಮ ಸಿನಿಮಾ ಕನಸು, ನಿರ್ದೇಶನದ ಮೇಲಿನ ಪ್ರೀತಿಯ ಬಗ್ಗೆ ರಕ್ಷಿತ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಬಾಲ್ಯದಲ್ಲಿದ್ದಾಗ ಉಡುಪಿಯ ದೇವಾಲಯಗಳಿಗೆ ಅಮ್ಮನ ಕೈ ಹಿಡಿದು ಹೋಗುತ್ತಿದ್ದ ನೆನಪುಗಳನ್ನು ಹಂಚಿಕೊಂಡ ರಕ್ಷಿತ್, ಅದು ನನ್ನ ಕನಸು ಹುಟ್ಟಿದ ಜಾಗ ಎಂದಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ ಪರಶುರಾಮ ಮತ್ತು ಆತನ ಕೊಡಲಿಯೇ ಸ್ಪೂರ್ತಿ ಎಂದಿದ್ದಾರೆ. ಈ ಎರಡು ಸಿನಿಮಾಗಳ ಕನಸಿನೊಂದಿಗೆ ನಾಲ್ಕು ವರ್ಷ ಕಳೆದಿದ್ದೇನೆ, ಇನ್ನೂ ನಾಲ್ಕು ವರ್ಷ ಹೀಗೆಯೇ ಕಳೆಯೋದು ಇದೆ ಅನಿಸುತ್ತದೆ. ನಿರ್ದೇಶಕನ ಸೀಟ್ ನಲ್ಲಿ ಕೂರುವುದು ಯಾವತ್ತೂ ನನಗೆ ವಿಶೇಷ ಖುಷಿ ಕೊಡುತ್ತದೆ. ಮತ್ತೆ ವರ್ಷಗಳ ಬ್ರೇಕ್ ನ ನಂತರ ಅದೇ ಸೀಟ್ ನಲ್ಲಿ ಕೂರುತ್ತಿರುವುದರ ಸಂತೋಷವೇ ಬೇರೆ ಎಂದು ತಮ್ಮ ಕನಸುಗಳ ಬಗ್ಗೆ ವಿಡಿಯೋದಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ ರಕ್ಷಿತ್.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 6 ನಸುಕಿನಲ್ಲೇ ಸರ್ಪೈಸ್ ನೀಡಲಿದೆ ಸಲಾರ್ ಟೀಂ!