Publish Date: Sun, 02 Jul 2023 (07:40 IST)
Updated Date: Sun, 02 Jul 2023 (07:50 IST)
ಬೆಂಗಳೂರು: ಮುಂಗಾರು ಮಳೆ ಎಂಬ ಸಿನಿಮಾ ಮೂಲಕ ಇಡೀ ಕನ್ನಡ ಸಿನಿ ಪ್ರಿಯರನ್ನು ಪ್ರೀತಿಯ ಮಳೆಯಲ್ಲಿ ತೋಯಿಸಿದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಜನ್ಮದಿನದ ಸಂಭ್ರಮ.
ಗಣೇಶ್ ಇಂದು 43 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕಾಮಿಡಿ ಟೈಮ್ ಎಂಬ ಟಿವಿ ಶೋ ಮೂಲಕ ಬಣ್ಣದ ಬದುಕಿಗೆ ಬಂದ ಗಣೇಶ್ ಬಳಿಕ ಟಿವಿಯಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟು ಅನೇಕ ಹಿಟ್ ಚಿತ್ರಗಳನ್ನು ನೀಡಿದರು.
ಇಂದು ಗೋಲ್ಡನ್ ಸ್ಟಾರ್ ಮೆರೆಯುತ್ತಿರುವ ಗಣೇಶ್ ಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಈ ಬಾರಿ ಅವರ ಹುಟ್ಟುಹಬ್ಬದ ನಿಮಿತ್ತ ಅವರ ಹೊಸ ಸಿನಿಮಾ ಟೈಟಲ್ ಲಾಂಚ್ ಆಗಿದೆ. ದಂಡುಪಾಳ್ಯ ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾಗೆ ಕೃಷ್ಣಂ ಪ್ರಣಯ ಸಖಿ ಎಂದು ಟೈಟಲ್ ಇಡಲಾಗಿದೆ. ಇದು ಗಣೇಶ್ ನಾಯಕರಾಗಿರುವ 41 ನೇ ಸಿನಿಮಾ.