Publish Date: Tue, 04 Jul 2023 (08:20 IST)
Updated Date: Tue, 04 Jul 2023 (08:54 IST)
Photo Courtesy: Instagram
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾರ್ಯಕ್ರಮವೊಂದಕ್ಕೆ ತೆರಳಿ ವೇಳೆ ತಾವು ಕಲಿತ ನಿಟ್ಟೆ ಕಾಲೇಜಿನ ಕಾರಿಡಾರಿನಲ್ಲಿ ಸುತ್ತಾಡಿ ಖುಷಿಪಟ್ಟಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ರಕ್ಷಿತ್ ಶೆಟ್ಟಿ ನಿಟ್ಟೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಇದೀಗ ಮತ್ತೆ ಅವರು ತಮ್ಮ ಕಾಲೇಜು ಕಾರಿಡಾರಿನಲ್ಲಿ ಸುತ್ತಾಡಿ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳೊಂದಿಗೆ ಒಡನಾಡಿದ್ದಲ್ಲದೆ, ಕ್ಯಾಂಟೀನ್ ನಲ್ಲಿ ಊಟ ಸವಿದು ಖುಷಿಪಟ್ಟಿದ್ದಾರೆ. ಈ ವೇಳೆ ಅವರಿಗೆ ಆಂಕರ್ ಅನುಶ್ರೀ ಕೂಡಾ ಸಾಥ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Krishnaveni K
Publish Date: Tue, 04 Jul 2023 (08:20 IST)
Updated Date: Tue, 04 Jul 2023 (08:54 IST)