ಹೈದರಾಬಾದ್: ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಲಿಯೋ ಸಿನಿಮಾ ಮೂಲಕ ದಳಪತಿ ವಿಜಯ್ ಗೆ ಹಲವು ವರ್ಷಗಳ ಬಳಿಕ ನಾಯಕಿಯಾಗಿದ್ದರು.
ಇದೀಗ ಮತ್ತೊಬ್ಬ ಸೂಪರ್ ಸ್ಟಾರ್ ಗೆ 17 ವರ್ಷಗಳ ಬಳಿಕ ನಾಯಕಿಯಾಗುತ್ತಿರುವ ಸುದ್ದಿ ಕೇಳಿಬಂದಿದೆ. ಮೆಗಾಸ್ಟಾರ್ ಚಿರಂಜೀವಿ 156 ನೇ ಸಿನಿಮಾಗೆ ತ್ರಿಶಾ ನಾಯಕಿ ಎಂಬ ಸುದ್ದಿ ಕೇಳಿಬಂದಿದೆ. ಆ ಮೂಲಕ 17 ವರ್ಷಗಳ ಬಳಿಕ ಚಿರಂಜೀವಿಗೆ ತ್ರಿಶಾ ನಾಯಕಿಯಾಗಲಿದ್ದಾರೆ.
2006 ರಲ್ಲಿ ತ್ರಿಶಾ-ಚಿರಂಜೀವಿ ಜೊತೆಯಾಗಿ ನಟಿಸಿದ್ದ ಸ್ಟಾಲಿನ್ ಸಿನಿಮಾ ಬಿಡುಗಡೆಯಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ತ್ರಿಶಾ-ಚಿರು ಜೋಡಿಯಾಗುತ್ತಿದ್ದಾರೆ.