Publish Date: Sat, 01 Jul 2023 (08:30 IST)
Updated Date: Sat, 01 Jul 2023 (08:31 IST)
ಹೈದರಾಬಾದ್: ಇತ್ತೀಚೆಗೆ ಹೆಣ‍್ಣು ಮಗುವಿಗೆ ಪೋಷಕರಾದ ನಟ ರಾಮ್ ಚರಣ್ ತೇಜ ಮತ್ತು ಉಪಾಸನಾ ದಂಪತಿ ತಮ್ಮ ಮಗಳಿಗೆ ವಿಶಿಷ್ಟ ಹೆಸರಿಟ್ಟಿದ್ದಾರೆ.
ಆರ್ ಆರ್ ಆರ್ ಸ್ಟಾರ್ ತಮ್ಮ ಮಗಳಿಗೆ ಕ್ಲಿನ್ ಕಾರಾ ಕೊನಿಡೆಲಾ ಎಂದು ಹೆಸರಿಟ್ಟಿದ್ದಾರೆ. ಕೊನಿಡೆಲಾ ಮನೆತನದ ಹೆಸರು. ಕ್ಲಿನ್ ಕಾರಾ ಎಂದು ಮಗುವಿನ ಹೆಸರಾಗಿರಲಿದೆ. ಈ ಹೆಸರನ್ನು ಲಲಿತಸಹಸ್ರನಾಮದಿಂದ ಪಡೆದುಕೊಳ್ಳಲಾಗಿದೆಯಂತೆ. ಎಲ್ಲರಿಗೂ ತಿಳಿದಿರುವ ಹಾಗೆ ರಾಮ್ ಚರಣ್-ಉಪಾಸನಾ ಅಪಾರ ದೈವ ಭಕ್ತರು. ಹೀಗಾಗಿ ಮಗಳಿಗೂ ದೇವಿಗೆ ಸಂಬಂಧಪಟ್ಟ ಹೆಸರಿಟ್ಟಿದ್ದಾರೆ.
ನಿನ್ನೆ ಮಗುವಿನ ತೊಟ್ಟಿಲಶಾಸ್ತ್ರ ಮತ್ತು ನಾಮಕರಣ ಅದ್ಧೂರಿಯಾಗಿ ನೆರವೇರಿದ್ದು ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ತೊಟ್ಟಿಲು ಸುಮಾರು 1 ಕೋಟಿ ರೂ. ಬೆಲೆ ಬಾಳುವಂತಹದ್ದು ಎನ್ನಲಾಗಿದೆ.