ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕೆಜಿಎಫ್ ಮತ್ತು ಸಲಾರ್ ಸಿನಿಮಾಗಳು ಮುಂದೆ ಒಂದಾಗಲಿವೆ ಎಂಬ ಮಾತು ಕೇಳಿಬರುತ್ತಿತ್ತು. ಕೆಜಿಎಫ್ 2 ನಲ್ಲಿ ಸಮುದ್ರದಲ್ಲಿ ಮುಳುಗಿದ್ದ ರಾಕಿ ಭಾಯಿಯನ್ನು ಸಲಾರ್ ನ ಪ್ರಭಾಸ್ ರಕ್ಷಿಸಲಿದ್ದಾರೆ ಎನ್ನಲಾಗಿತ್ತು. ಅದಕ್ಕೀಗ ನೆಟ್ಟಿಗರು ಸಾಕ್ಷಿ ಕಂಡುಹಿಡಿದಿದ್ದಾರೆ.
ಸಲಾರ್ ಟೀಸರ್ ಇಂದು ಬಿಡುಗಡೆಯಾಗಿದ್ದು, ಈ ಟೀಸರ್ ನೋಡಿದ ಬಳಿಕ ಪ್ರೇಕ್ಷಕರ ಊಹೆ ಮತ್ತಷ್ಟು ಖಚಿತವಾಗಿದೆ. ಕೆಜಿಎಫ್ ನಲ್ಲಿ ಬಳಸಲಾದ ಸೆಟ್ ನಲ್ಲಿದ್ದ ಟ್ಯಾಂಕರ್ ಗಳು ಸಲಾರ್ ನಲ್ಲೂ ಇವೆ. ಹೀಗಾಗಿ ಮುಂದೆ ಈ ಎರಡೂ ಸಿನಿಮಾಗಳ ಕಂಬೈನ್ಡ್ ವರ್ಷನ್ ನೋಡಬಹುದು ಎಂಬುದು ಖಾತ್ರಿಯಾಗಿದೆ.
ಹೊಂಬಾಳೆ ಫಿಲಂಸ್ ಈಗಾಗಲೇ ಕೆಜಿಎಫ್ 3 ಮಾಡುವುದಾಗಿ ಘೋಷಿಸಿದೆ. ಆದರೆ ಕೆಜಿಎಫ್ 2 ನಲ್ಲಿ ಸಮುದ್ರದಲ್ಲಿ ಮುಳುಗಿದ್ದ ರಾಕಿಯನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆಯಿತ್ತು. ಕೆಲವರು ಈಗಾಗಲೇ ಸಲಾರ್ ನಾಯಕನೇ ರಾಕಿಭಾಯಿಯನ್ನು ರಕ್ಷಿಸಲಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಅದೀಗ ನಿಜವಾಗುವ ಲಕ್ಷಣ ಕಾಣುತ್ತಿದೆ.