Publish Date: Mon, 19 Jun 2023 (16:17 IST)
Updated Date: Mon, 19 Jun 2023 (16:19 IST)
ಹೈದರಾಬಾದ್: ಆದಿಪುರುಷ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚುತ್ತಿದ್ದರೂ ಸಿನಿಮಾ ಬಗ್ಗೆ ಟೀಕೆಗಳೂ ಕೇಳಿಬಂದಿದೆ. ಹೀಗಾಗಿ ಈಗ ಪ್ರಭಾಸ್ ಅಭಿಮಾನಿಗಳು ಸಲಾರ್ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಪ್ರಶಾಂತ್ ನೀಲ್-ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿದ್ದು, ಎರಡು ವಾರದ ಬಳಿಕ ಟೀಸರ್ ಬಿಡುಗಡೆ ಬಗ್ಗೆ ಅಪ್ ಡೇಟ್ ಸಿಗುವ ಸಾಧ‍್ಯತೆಯಿದೆ.
ಎಲ್ಲಾ ಸರಿ ಹೋಗಿದ್ದರೆ ಆದಿಪುರುಷ್ ಸಿನಿಮಾ ಪ್ರದರ್ಶನದ ಜೊತೆಗೆ ಸಲಾರ್ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಅದು ಸಾಧ‍್ಯವಾಗಿಲ್ಲ. ಇದೀಗ ಟೀಸರ್ ಮೇಲೆ ಎಲ್ಲರ ನಿರೀಕ್ಷೆಯಿದೆ.