Publish Date: Sun, 18 Jun 2023 (08:50 IST)
Updated Date: Sun, 18 Jun 2023 (08:59 IST)
ಹೈದರಾಬಾದ್: ಟಾಲಿವುಡ್ ಗೆ ಕಾಲಿಟ್ಟಿರುವ ಕನ್ನಡದ ಬೆಡಗಿ ಶ್ರೀಲೀಲಾ ಈಗ ಒಂದಾದ ಮೇಲೊಂದರಂತೆ ಅವಕಾಶ ಗಿಟ್ಟಿಸುತ್ತಿದ್ದಾರೆ.
ಶ್ರೀಲೀಲಾ ಒಟ್ಟೊಟ್ಟಿಗೇ ಐದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಪಡೆದಿದ್ದ ಪ್ರಾಮುಖ್ಯತೆ ಈಗ ಶ್ರೀಲೀಲಾ ಪಾಲಾಗುತ್ತಿದೆ.
ಶ್ರೀಲೀಲಾ ಕೇವಲ ರಶ್ಮಿಕಾ ಮಾತ್ರವಲ್ಲ, ಟಾಲಿವುಡ್ ನ ಇನ್ನೊಬ್ಬ ಬೆಡಗಿ ಪೂಜಾ ಹೆಗ್ಡೆ ಜೊತೆಗೂ ಕಾಂಪಿಟೀಷನ್ ಗೆ ಮುಂದಾಗಿದ್ದಾರೆ. ಮಹೇಶ್ ಬಾಬು ನಾಯಕರಾಗಿರುವ ಗುಂಟೂರು ಖಾರಂ ಸಿನಿಮಾದಲ್ಲಿ ಪೂಜಾ ಹೆಗ್ಡೆ ಜೊತೆ ಶ್ರೀಲೀಲಾ ಕೂಡಾ ಅಭಿನಯಿಸಲಿದ್ದಾರೆ. ಪವನ್ ಕಲ್ಯಾಣ್ ಜೊತೆಗಿನ ಸಿನಿಮಾದಲ್ಲೂ ಪೂಜಾ ಹೆಗ್ಡೆ ಜೊತೆ ಶ್ರೀಲೀಲಾ ಅಭಿನಯಿಸಲಿದ್ದಾರೆ. ಇತ್ತೀಚೆಗೆ ಶ್ರೀಲೀಲಾ ಹುಟ್ಟುಹಬ್ಬಕ್ಕೆ ಎರಡೂ ಸಿನಿಮಾ ತಂಡಗಳೂ ಪೋಸ್ಟರ್ ಬಿಡುಗಡೆ ಮಾಡಿದ್ದರು. ಆದರೆ ಇವೆರಡನ್ನೂ ಪೂಜಾ ಹೆಗ್ಡೆ ಶೇರ್ ಮಾಡಿಲ್ಲ, ಶ್ರೀಲೀಲಾಗೂ ಹುಟ್ಟುಹಬ್ಬಕ್ಕೆ ವಿಶ್ ಮಾಡಿಲ್ಲ. ಹೀಗಾಗಿ ಇಬ್ಬರ ನಡುವೆ ಶೀತಲ ಸಮರವಿದೆ ಎನ್ನಲಾಗಿದೆ.