Publish Date: Fri, 16 Jun 2023 (08:30 IST)
Updated Date: Fri, 16 Jun 2023 (08:40 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಇಂದು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ.
ಮೊದಲ ದಿನವೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಭಾಸ್ ಸಿನಿಮಾ ಎಂದರೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲವಿದ್ದೇ ಇರುತ್ತದೆ.
ಈಗಾಗಲೇ ಅಡ್ವಾನ್ಸ್ ಟಿಕೆಟ್ ದಾಖಲೆಯ ಪ್ರಮಾಣದಲ್ಲಿ ಬಿಕರಿಯಾಗಿದೆ. ಹೀಗಾಗಿ ಮೊದಲ ದಿನವೇ 80 ಕೋಟಿ ರೂ. ಗಳಿಕೆ ಮಾಡುವ ನಿರೀಕ್ಷೆಯಿದೆ. ಉಚಿತ ಟಿಕೆಟ್ ಮೂಲಕ 3 ಕೋಟಿ ರೂ. ಬಿಸ್ನೆಸ್ ಆಗಿದೆ ಎನ್ನಲಾಗಿದೆ. 500 ಕೋಟಿ ರೂ. ಬಜೆಟ್ ನ ಸಿನಿಮಾ ಇದಾಗಿದ್ದು, ಮೊದಲ ದಿನವೇ ದಾಖಲೆಯ ಗಳಿಕೆ ನಿರೀಕ್ಷೆಯಲ್ಲಿದೆ.