Select Your Language

Notifications

webdunia
webdunia
webdunia
Saturday, 29 March 2025
webdunia

ಭಾರತ ಚಿತ್ರರಂಗದ ಶ್ರೀಮಂತ ಟಾಪ್ 7 ಕಾಮಿಡಿಯನ್ ಯಾರು?

ಭಾರತ ಚಿತ್ರರಂಗದ ಶ್ರೀಮಂತ ಟಾಪ್ 7 ಕಾಮಿಡಿಯನ್ ಯಾರು?
ಹೈದರಾಬಾದ್ , ಮಂಗಳವಾರ, 13 ಜೂನ್ 2023 (08:20 IST)
Photo Courtesy: Twitter
ಹೈದರಾಬಾದ್: ಭಾರತ ಚಿತ್ರರಂಗದಲ್ಲಿ ಹಾಸ್ಯ ನಟರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಸ್ಯ ನಟರಿಗೆ ಅವರದ್ದೇ ಆದ ಅಭಿಮಾನಿ ವರ್ಗದವರಿದ್ದಾರೆ. ಸ್ಟಾರ್ ವಾಲ್ಯೂ ಕೂಡಾ ಇದೆ.

ಇಂದು ಹಾಸ್ಯ ನಟರೂ ಸ್ಟಾರ್ ನಟರಂತೇ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಿದ್ದರೆ ಭಾರತೀಯ ಚಿತ್ರರಂಗದ ಪೈಕಿ ಶ್ರೀಮಂತ ಹಾಸ್ಯ ನಟ ಯಾರು ಗೊತ್ತಾ?

ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ ಭಾರತದ ಶ್ರೀಮಂತ ಕಾಮೆಡಿಯನ್. ಅವರ ಆಸ್ತಿ ಮೌಲ್ಯ 350 ಕೋಟಿ ಎನ್ನಲಾಗಿದೆ. ಕಪಿಲ್ ಶರ್ಮಾ, ಸುನಿಲ್ ಗ್ರೋವರ್, ಪರೇಶ್ ರಾವಲ್ ಮುಂತಾದ ಕಲಾವಿದರನ್ನೂ ಬ್ರಹ್ಮಾನಂದ ಮೀರಿಸಿದ್ದಾರೆ. ಪ್ರತೀ ತಿಂಗಳ ವೇತನ ಸುಮಾರು 2 ಕೋಟಿಯಷ್ಟು. ಹಲವು ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್. ದುಬಾರಿ ಕಾರುಗಳು, ಆಸ್ತಿ ಬ್ರಹ್ಮಾನಂದಂ ಬಳಿಯಿದ್ದು, ಯಾವ ಸ್ಟಾರ್ ನಟರಿಗೂ ಕಮ್ಮಿಯಿಲ್ಲದಂತೆ ಜೀವನ ಮಾಡುತ್ತಿದ್ದಾರೆ. ಅವರ ಬಳಿಕ ಶ್ರೀಮಂತರ ಪಟ್ಟಿಯಲ್ಲಿ ಕಪಿಲ್ ಶರ್ಮಾ, ಜಾನಿ ಲಿವರ್, ಪರೇಶ್ ರಾವಲ್, ವಡಿವೇಲು, ರಾಜ್ ಪಾಲ್ ಯಾದವ್ ಮತ್ತಿತರರು ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

50 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಡ್ಯಾನ್ಸ್ ಕಿಂಗ್ ಪ್ರಭುದೇವ