ಮುಂಬೈ: ನಟ, ನಿರ್ದೇಶಕ ಪ್ರಭುದೇವ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
50 ನೇ ವಯಸ್ಸಿನಲ್ಲಿ ಪ್ರಭುದೇವ ಹೆಣ್ಣು ಮಗುವಿಗೆ ತಂದೆಯಾಗಿದ್ದು, ಅವರ ಕುಟುಂಬದಲ್ಲಿ ಇದು ಮೊದಲನೆಯ ಹೆಣ್ಣು ಮಗು ಎಂಬ ಕಾರಣಕ್ಕೆ ಸಂಭ್ರಮ ಮನೆ ಮಾಡಿದೆ.
ಇದಕ್ಕೆ ಮೊದಲು ಪ್ರಭುದೇವ ಮೊದಲ ಪತ್ನಿಯಿಂದ ಮೂವರು ಗಂಡು ಮಕ್ಕಳನ್ನು ಪಡೆದಿದ್ದರು. ಆ ಪೈಕಿ ಓರ್ವ ಪುತ್ರ ಸಾವನ್ನಪ್ಪಿದ್ದ. ಇದೀಗ ನಾಲ್ಕನೇ ಬಾರಿಗೆ ಪ್ರಭುದೇವ ತಂದೆಯಾಗಿದ್ದಾರೆ.