Publish Date: Sat, 17 Jun 2023 (17:33 IST)
Updated Date: Sat, 17 Jun 2023 (17:35 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾ ಟ್ರೋಲ್ ಗಳ ಮಧ‍್ಯೆಯೂ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ.
ಸಿನಿಮಾದಲ್ಲಿ ಬಳಸಲಾದ ಗ್ರಾಫಿಕ್ಸ್ ಬಗ್ಗೆ ಅನೇಕರು ಟ್ರೋಲ್ ಮಾಡುತ್ತಲೇ ಇದ್ದಾರೆ. ಹಾಗಿದ್ದರೂ ಅದರ ನಡುವೆಯೂ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ.
ಮೊದಲ ದಿನ 85 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ಸುದ್ದಿಯಿದೆ. ಸಿನಿಮಾಗೆ 500 ಕೋಟಿ ರೂ. ಬಂಡವಾಳ ಹೂಡಲಾಗಿತ್ತು. ಇದೀಗ ವೀಕೆಂಡ್ ನಲ್ಲಿ ಮತ್ತಷ್ಟು ಗಳಿಕೆ ಮಾಡುವ ವಿಶ್ವಾಸದಲ್ಲಿದೆ.