Select Your Language

Notifications

webdunia
webdunia
webdunia
webdunia

ವಿಜಯ್ ದೇವರಕೊಂಡಗೆ ರಶ್ಮಿಕಾ ಅಲ್ಲ ಮೃಣಾಲ್ ಠಾಕೂರ್ ಜೋಡಿ!

ವಿಜಯ್ ದೇವರಕೊಂಡಗೆ ರಶ್ಮಿಕಾ ಅಲ್ಲ ಮೃಣಾಲ್ ಠಾಕೂರ್ ಜೋಡಿ!
ಹೈದರಾಬಾದ್ , ಶುಕ್ರವಾರ, 16 ಜೂನ್ 2023 (08:40 IST)
Photo Courtesy: Twitter
ಹೈದರಾಬಾದ್: ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಟಾಲಿವುಡ್ ನ ಹಿಟ್ ಪೇರ್. ಇಬ್ಬರೂ ಜೊತೆಯಾಗಿ ನಡೆಸಿದ್ದ ಗೀತಾ ಗೋವಿಂದಂ ಭಾರೀ ಯಶಸ್ಸು ತಂದುಕೊಟ್ಟಿತ್ತು.

ರಶ್ಮಿಕಾ ಮತ್ತು ವಿಜಯ್ ಈ ಸಿನಿಮಾ ಬಳಿಕ ಡೇಟಿಂಗ್ ಕೂಡಾ ಮಾಡಿದ್ದರು. ಆದರೆ ಬಳಿಕ ಇಬ್ಬರೂ ಬ್ರೇಕಪ್ ಆಗಿದ್ದಾರೆಂಬ ಸುದ್ದಿಯೂ ಇತ್ತು. ಹೀಗಿದ್ದರೂ ಇಬ್ಬರ ನಡುವಿನ ಸ್ನೇಹ ಮುಂದುವರಿದಿತ್ತು. ಇದೀಗ ಅದೇ ಗೀತಾ ಗೋವಿಂದಂ ತಂಡ ಮತ್ತೊಂದು ಸಿನಿಮಾ ಮಾಡುತ್ತಿದೆ. ಈ ಸಿನಿಮಾದಲ್ಲೂ ಅದೇ ಹಿಟ್ ಜೋಡಿ ಜೋಡಿಯಾಗಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಬ್ರೇಕಪ್ ಮಹಿಮೆಯೋ ಏನೋ ರಶ್ಮಿಕಾ ಜಾಗಕ್ಕೆ ಮೃಣಾಲ್ ಠಾಕೂರ್ ಬಂದಿದ್ದಾರೆ. ವಿಜಯ್ ಜೊತೆ ಮೃಣಾಲ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮವೂ ಇತ್ತೀಚೆಗೆ ನೆರವೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷ್ ರಿಲೀಸ್ ಇಂದು: ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು?