Publish Date: Sun, 18 Jun 2023 (19:04 IST)
Updated Date: Sun, 18 Jun 2023 (19:06 IST)
ಹೈದರಾಬಾದ್: ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ನಿಂದಲೇ ವಂಚನೆಯಾದ ಬಗ್ಗೆ ವರದಿಯಾಗಿದೆ.
ನಟಿ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಸಂಭಾವನೆ ಕೂಡಾ ದುಬಾರಿಯೇ. ಹೀಗಾಗಿ ರಶ್ಮಿಕಾ ದುಬಾರಿ ಸಂಭಾವನೆ ಪಡೆಯುವ ನಟಿಯರ ಲಿಸ್ಟ್ ನಲ್ಲಿದ್ದಾರೆ.
ಇಂತಿಪ್ಪ ರಶ್ಮಿಕಾಗೆ ಅವರ ಮ್ಯಾನೇಜರ್ ಅವರೇ ಸುಮಾರು 80 ಲಕ್ಷ ರೂ.ಗಳಷ್ಟು ವಂಚನೆ ಮಾಡಿದ್ದಾರೆಂದು ತಿಳಿದುಬಂದಿದೆ. ರಶ್ಮಿಕಾರ ಜಾಹೀರಾತು ಒಪ್ಪಂದಗಳು, ಸಿನಿಮಾಗಳ ಸಂಭಾವನೆಗಳನ್ನು ನಿಭಾಯಿಸುತ್ತಿದ್ದ ಮ್ಯಾನೇಜರ್ ರಶ್ಮಿಕಾಗೇ ತಿಳಿಯದಂತೆ ಅವರಿಗೆ ನೀಡಬೇಕಾಗಿದ್ದ 80 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಇನ್ನು, ತನ್ನ ಆಪ್ತನ ವಂಚನೆ ತಿಳಿಯುತ್ತಿದ್ದಂತೇ ರಶ್ಮಿಕಾ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ತಿಳಿದುಬಂದಿದೆ.