ಹೈದರಾಬಾದ್: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾದ ಖುಷಿಯಲ್ಲಿರುವ ನಟ ರಾಮ್ ಚರಣ್ ತೇಜ ಮಗಳ ಜೊತೆ ಸಮಯ ಕಳೆಯಲು ಶೂಟಿಂಗ್ ನಿಂದ ಬ್ರೇಕ್ ಪಡೆದಿದ್ದರು.
ಪಿತೃತ್ವ ರಜೆಯಲ್ಲಿದ್ದ ರಾಮ್ ಚರಣ್ ತಮ್ಮೆಲ್ಲಾ ಸಿನಿಮಾ ಕೆಲಸಗಳನ್ನು ಬದಿಗೊತ್ತಿ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ. ಇದೀಗ ರಜೆ ಮುಗಿಸಿಕೊಂಡು ರಾಮ್ ಚರಣ್ ಮತ್ತೆ ಕೆಲಸದ ಕಡೆಗೆ ಗಮನ ಹರಿಸಲಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಬ್ರೇಕ್ ನಲ್ಲಿದ್ದ ರಾಮ್ ಚರಣ್ ಇಂದಿನಿಂದ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.