Publish Date: Sat, 08 Jul 2023 (09:30 IST)
Updated Date: Sat, 08 Jul 2023 (09:31 IST)
ಹೈದರಾಬಾದ್: ಇತ್ತೀಚೆಗೆ ಸಿನಿಮಾ ಸ್ಟಾರ್ ಗಳು ರಾಜಕೀಯ ಸೇರ್ಪಡೆ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಇದೀಗ ತೆಲುಗು ನಟ ನಿತಿನ್ ಬಗ್ಗೆ ಇಂತಹದ್ದೇ ಸುದ್ದಿ ಕೇಳಿಬರುತ್ತಿದೆ.
ಸಿನಿಮಾಗಳಲ್ಲಿ ಸಕ್ರಿಯರಾಗಿರುವ ನಿತಿನ್ ಸದ್ಯದಲ್ಲೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮುಂದಿನ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿವೆ.
ಇದಕ್ಕೆ ಮೊದಲು ನಟ ದಳಪತಿ ವಿಜಯ್ ಬಗ್ಗೆಯೂ ಇಂತಹದ್ದೇ ಸುದ್ದಿ ಕೇಳಿಬಂದಿತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ನಿತಿನ್ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.