Publish Date: Fri, 07 Jul 2023 (20:37 IST)
Updated Date: Fri, 07 Jul 2023 (20:39 IST)
ಬೆಂಗಳೂರು: ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅಪರಾಹ್ನ ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದಾರೆ.
ರಿಷಬ್ ತಮ್ಮ ಜನ್ಮದಿನಕ್ಕೆ ಅಭಿಮಾನಿಗಳನ್ನು ಭೇಟಿ ಮಾಡಲು ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಿಷಬ್ ಸ್ನೇಹಿತ, ನಟ ಪ್ರಮೋದ್ ಶೆಟ್ಟಿ ಮತ್ತು ಗ್ಯಾಂಗ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ವೇಳೆ ಮಳೆಯನ್ನೂ ಲೆಕ್ಕಿಸದೇ ಅಭಿಮಾನಿಗಳು ರಿಷಬ್ ರನ್ನು ನೋಡಲು ಬಂದಿದ್ದಾರೆ. ಎಲ್ಲರನ್ನೂ ಭೇಟಿ ಮಾಡಿದ ರಿಷಬ್ ಭಾವುಕರಾಗಿ ಮಾತನಾಡಿದ್ದಾರೆ. ಇಲ್ಲಿಗೆ ಬಂದಾಗ ಗಾಂಧಿನಗರದಲ್ಲಿ ಥಿಯೇಟರ್ ಎಲ್ಲಿದೆ ಎಂದೇ ಗೊತ್ತಿರಲಿಲ್ಲ. ಆದರೆ ನನ್ನಂತ ಮಿಡ್ಲ್ ಕ್ಲಾಸ್ ಹುಡುಗನ ಕನಸಿಗೆ ಜೀವ ತುಂಬಿದವರು ನೀವು. ನಾನು ನನ್ನ ಜೀವನದಲ್ಲಿ ಮಾಡಿದ ದೊಡ್ಡ ಸಂಪಾದನೆ ಎಂದರೆ ನೀವೇ. ಇಷ್ಟು ಮಳೆಯನ್ನೂ ಲೆಕ್ಕಿಸದೇ ನನ್ನನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೀರಿ. ನಿಮ್ಮ ಋಣವನ್ನು ತೀರಿಸಲು ನಾನು ಪ್ರಯತ್ನಿಸುತ್ತಲೇ ಇರುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.