Publish Date: Sat, 08 Jul 2023 (08:20 IST)
Updated Date: Sat, 08 Jul 2023 (08:45 IST)
ಹೈದರಾಬಾದ್: ಅನಾರೋಗ್ಯ ಸಮಸ್ಯೆಯಿಂದಾಗಿ ಸೌತ್ ಬೆಡಗಿ ಸಮಂತಾ ಋತು ಪ್ರಭುಗೆ ಈಗ ಮೊದಲಿನಂತೆ ಚಿತ್ರರಂಗದಲ್ಲಿ ಸಕ್ರಿಯವಾಗಿರಲು ಸಾಧ‍್ಯವಾಗುತ್ತಿಲ್ಲ.
ಮಾಂಸಖಂಡಳಿಗೆ ಬರುವ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಸಮಂತಾ ಕೆಲವು ಸಮಯ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಇದಾದ ಬಳಿಕ ಅವರು ಎರಡು ಸಿನಿಮಾಗಳನ್ನು ಮಾಡಿದ್ದಾರೆ.
ಆದರೆ ಈಗ ಮತ್ತೆ ಚಿಕಿತ್ಸೆ ಪಡೆಯಲು ಅಮೆರಿಕಾಗೆ ತೆರಳಲಿದ್ದು, ಒಂದು ತಿಂಗಳ ಕಾಲ ಸಿನಿಮಾಗಳಿಂದ ಬ್ರೇಕ್ ಪಡೆಯಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಲೇಟೆಸ್ಟ್ ಮಾಹಿತಿ ಪ್ರಕಾರ ಒಂದು ತಿಂಗಳಲ್ಲ. ಒಂದು ವರ್ಷ ಸಿನಿಮಾಗಳಿಂದ ಬ್ರೇಕ್ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ.