ಬೆಂಗಳೂರು: ಭಾರತದ ಮೈಕಲ್ ಜ್ಯಾಕ್ಸನ್ ಖ್ಯಾತಿಯ ಕನ್ನಡಿಗರೇ ಆದ ಬಹುಭಾಷಾ ನಟ, ನಿರ್ದೇಶಕ, ಡ್ಯಾನ್ಸ್ ಕಿಂಗ್ ಪ್ರಭುದೇವ ಇಂದು ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಭುದೇವ ಈ ಮೊದಲು ಜೀ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಡಿಕೆಡಿ ಶೋಗೆ ಬಂದಿದ್ದಾರೆ. ಅವರು ಪಾಲ್ಗೊಂಡ ಎಪಿಸೋಡ್ ನ ಪ್ರೋಮೋಗಳು ಈಗಾಗಲೇ ವೈರಲ್ ಆಗಿದೆ.
ಡಿಕೆಡಿ ಶೋನಲ್ಲಿ ಸ್ಪರ್ಧಿಗಳಿಗೆ ಪ್ರೋತ್ಸಾಹ ಕೊಟ್ಟಿರುವುದಲ್ಲದೆ, ತಾವೇ ಸ್ವತಃ ಸ್ಟೆಪ್ಸ್ ಹಾಕಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಪ್ರಭುದೇವ. ಈ ಎಪಿಸೋಡ್ ಗಳನ್ನು ಇಂದು ಮತ್ತು ನಾಳೆ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ.