Publish Date: Wed, 13 Jul 2022 (08:20 IST)
Updated Date: Wed, 13 Jul 2022 (09:05 IST)
ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ಗಳ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿದ್ದ ಪ್ರಭಾಸ್ ಈಗ ಮೂರನೇ ಸ್ಥಾನಕ್ಕಿಳಿದಿದ್ದಾರೆ.
ಇತ್ತೀಚೆಗೆ ನಡೆದಿದ್ದ ಸಮೀಕ್ಷೆಯೊಂದರಲ್ಲಿ ಪ್ರಭಾಸ್ ರನ್ನು ಅಲ್ಲು ಅರ್ಜುನ್, ರಾಕಿಂಗ್ ಸ್ಟಾರ್ ಯಶ್ ಹಿಂದಿಕ್ಕಿದ್ದರು. ಇದಕ್ಕೆ ಅವರು ನಟಿಸಿ ಬಿಡುಗಡೆಯಾಗಿದ್ದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಬೆನ್ನು ಬೆನ್ನಿಗೆ ಸೋತಿರುವುದು.
ಬಾಹುಬಲಿ ಬಳಿಕ ಪ್ರಭಾಸ್ ಸಿನಿಮಾ ಹಿಟ್ ಆಗಿಲ್ಲ. ಈ ಕಾರಣಕ್ಕೆ ಈಗ ಮತ್ತೆ ತಮ್ಮ ಸ್ಟಾರ್ ಗಿರಿ ಮರಳಿ ಪಡೆಯಲು ಪ್ರಭಾಸ್ ಪ್ರಯತ್ನಿಸುತ್ತಿದ್ದಾರಂತೆ. ಇದಕ್ಕಾಗಿ ತಮಗೆ ಈ ಹಿಂದೆ ಹಿಟ್ ಚಿತ್ರ ಕೊಟ್ಟ ನಿರ್ದೇಶಕರ ಜೊತೆ ಟೀಂ ಅಪ್ ಆಗಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಮಿರ್ಚಿ ನಿರ್ದೇಶಕರ ಜೊತೆ ಪ್ರಭಾಸ್ ಮಾತುಕತೆ ನಡೆಸಿರುವುದು. ಸದ್ಯಕ್ಕೆ ಸಲಾರ್ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್ ಈ ಒಂದು ಸಿನಿಮಾ ಹಿಟ್ ಆದರೆ ಮತ್ತೆ ತಮ್ಮ ಸ್ಥಾನ ಮರಳಿ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.