Publish Date: Tue, 12 Jul 2022 (15:56 IST)
Updated Date: Tue, 12 Jul 2022 (15:58 IST)
ಚೆನ್ನೈ: ತಮಿಳು ನಟ ವಿಕ್ರಂ ಇತ್ತೀಚೆಗೆ ಹೃದಯ ಸಂಬಂಧೀ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಡಿಸ್ಚಾರ್ಜ್ ಆಗಿರುವ ವಿಕ್ರಂ ಕೋಬ್ರಾ ಸಿನಿಮಾದ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಹುಟ್ಟಿಕೊಂಡಿದ್ದ ವದಂತಿಗಳ ಬಗ್ಗೆ ಸ್ವತಃ ವಿಕ್ರಂ ಸ್ಪಷ್ಟನೆ ಕೊಟ್ಟಿದ್ದಾರೆ. ತಮಗೆ ಹೃದಯಾಘಾತವಾಗಿತ್ತು ಎಂಬ ಸುದ್ದಿಗಳನ್ನು ಅವರು ಅಲ್ಲಗಳೆದಿದ್ದಾರೆ.
ಇದು ಕೇವಲ ಹೃದಯದ ಸಣ್ಣ ಸಮಸ್ಯೆಯಾಗಿತ್ತು. ಹೃದಯಾಘಾತವಾಗಿರಲಿಲ್ಲ. ಹಾಗಿದ್ದರೂ ಕೆಲವರು ನನ್ನ ಫೋಟೋವನ್ನು ಎಡಿಟ್ ಮಾಡಿ ನನಗೆ ಏನೋ ಗಂಭೀರವಾದ ಸಮಸ್ಯೆಯಾಗಿದೆ ಎಂದು ಬಿಂಬಿಸಿದರು. ಅವರ ಕ್ರಿಯಾತ್ಮಕತೆಗೆ ಧನ್ಯವಾದಗಳು. ದೇವರ ದಯೆ, ಸ್ನೇಹಿತರು, ಕುಟುಂಬಸ್ಥರ ಹಾರೈಕೆ ನನಗಿತ್ತು. ಇದಕ್ಕಿಂತ ದೊಡ್ಡದು ನನಗೆ ಬೇರೇನೂ ಬೇಕಾಗಿಲ್ಲ ಎಂದಿದ್ದಾರೆ.