ಬೆಂಗಳೂರು: 60 ನೇ ಜನ್ಮದಿನಕ್ಕೆ ಕಾಲಿಟ್ಟ ಹಿನ್ನೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಒಂದೆಡೆ ಸಹೋದರ ಪುನೀತ್ ಇಲ್ಲದೇ ಜನ್ಮದಿನ ಆಚರಿಸುತ್ತಿರುವ ನೋವಿದ್ದರೂ ಅಭಿಮಾನಿಗಳಿಗಾಗಿ ಶಿವಣ್ಣ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ.
ಇಂದು ಜನ್ಮದಿನದ ಪ್ರಯುಕ್ತ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಶಿವಣ್ಣನ ನೋಡಲು ಅಭಿಮಾನಿಗಳು ಮುತ್ತಿಗೆ ಹಾಕಿದರು. ಎಲ್ಲರ ಜೊತೆ ಸೆಲ್ಫೀಗೆ ಪೋಸ್ ಕೊಟ್ಟು ಶಿವಣ್ಣ ಖುಷಿ ನೀಡಿದ್ದಾರೆ.