Publish Date: Thu, 29 Aug 2019 (09:39 IST)
Updated Date: Thu, 29 Aug 2019 (09:42 IST)
ಹೈದರಾಬಾದ್; ಬಾಹುಬಲಿ ಬಳಿಕ ಪ್ರಭಾಸ್ ಅಭಿನಯದ ಸಿನಿಮಾ ಸಾಹೋ ನಾಳೆ ತೆರೆಗೆ ಬರುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ ಮೊದಲ ದಿನವೇ ಇದು 60 ಕೋಟಿ ಗೂ ಅಧಿಕ ಗಳಿಕೆ ಮಾಡಿ ಕಬೀರ್ ಸಿಂಗ್, ಅವೆಂಜರ್ಸ್ ಸಿನಿಮಾಗಳ ದಾಖಲೆ ಮುರಿಯಲಿದೆಯಂತೆ. ಹಿಂದಿ ಅವತರಣಿಕೆಯಲ್ಲೇ 15 ರಿಂದ 20 ಕೋಟಿ ಗಳಿಕೆ ಮಾಡುವ ಲೆಕ್ಕಾಚಾರ ಹಾಕಲಾಗಿದೆ.
ಕನ್ನಡದಲ್ಲೂ ಇದು ಬಿಡುಗಡೆಯಾಗಲಿದ್ದು, ಕನ್ನಡ ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕುತೂಹಲ ಮೂಡಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಬಗ್ಗೆ ಪ್ರಭಾಸ್ ಕೂಡಾ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ದೇಶದಾದ್ಯಂತ ಒಟ್ಟಾರೆ 6000 ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದೆ.