Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ಕುಸ್ತಿ!

ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ಕುಸ್ತಿ!
ಬೆಂಗಳೂರು , ಭಾನುವಾರ, 25 ಆಗಸ್ಟ್ 2019 (09:11 IST)
ಬೆಂಗಳೂರು: ಪೈಲ್ವಾನ್ ಬಿಡುಗಡೆಯ ಹೊಸ್ತಲಿಲ್ಲಿರುವ ಕಿಚ್ಚ ಸುದೀಪ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜತೆಗೆ ಕುಸ್ತಿ ಆಡುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.


ಕಿಚ್ಚ ಹಿಂದಿಯ ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಜತೆಗೆ ಅಭಿನಯಿಸುತ್ತಿದ್ದಾರೆ. ಹೀಗಾಗಿ ಸಲ್ಲು ಮಿಯಾ ಜತೆ ಕಿಚ್ಚನಿಗೆ ವಿಶೇಷ ಸ್ನೇಹವಿದೆ.

ಇದೀಗ ಸುದೀಪ್ ಇಬ್ಬರೂ ಕುಸ್ತಿ ಆಡುವ ಭಂಗಿಯಲ್ಲಿರುವ ಫೋಟೋ ಒಂದನ್ನು ಶೇರ್ ಮಾಡಿದ್ದು, ಆ ಫೋಟದಲ್ಲಿ ಸುಲ್ತಾನ್ ವರ್ಸಸ್ ಪೈಲ್ವಾನ್ ಎಂದು ಬರೆಯಲಾಗಿದೆ. ಸುಲ್ತಾನ್ ಎಂಬ ಬಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಕೂಡಾ ಕುಸ್ತಿ ಪಟುವಿನ ಪಾತ್ರ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈ ಫೋಟೋ ಜತೆಗೆ ಕಿಚ್ಚ ನಿಮ್ಮ ಜೀವನದಲ್ಲಿ ನನಗೆ ವಿಶೇಷ ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಸಲ್ಮಾನ್ ಖಾನ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೈಲ್ವಾನ್ ಅಡಿಯೋ ಲಾಂಚ್ ಇಂದು ಜೀ ಕನ್ನಡದಲ್ಲಿ